ವ್ಯಾಟಿಕನ್‍ನಲ್ಲಿ ಪೋಪ್ ಭೇಟಿ ಮಾಡಿದ ಟ್ರಂಪ್

ಈ ಸುದ್ದಿಯನ್ನು ಶೇರ್ ಮಾಡಿ

Pope--01

ವ್ಯಾಟಿಕನ್ ಸಿಟಿ, ಮೇ 24-ವಿದೇಶಿ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ವ್ಯಾಟಿಕನ್‍ನಲ್ಲಿ ಕ್ರೈಸ್ತರ ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದರು. ಹಲವು ವಿಷಯಗಳ ಸಂಬಂಧ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಉಲ್ಬಣಗೊಂಡಿರುವಾಗಲೇ ಟ್ರಂಪ್- ಪೋಪ್ ಭೇಟಿ ಕುತೂಹಲ ಕೆರಳಿಸಿದೆ. ಟ್ರಂಪ್ ಪೋಪ್ ಜೊತೆ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು.



ಪೋಪ್ ಈ ಹಿಂದೆ ಹಲವಾರು ಭಾರಿ ತಮ್ಮ ಭಾಷಣದಲ್ಲಿ ಟ್ರಂಪ್‍ರ ಕೆಲವು ಧೋರಣೆಗಳನ್ನು ಬಲವಾಗಿ ಖಂಡಿಸಿದ್ದರು. ಮೆಕ್ಸಿಕೋ ಗಡಿಯಲ್ಲಿ ಗೋಡೆ ನಿರ್ಮಿಸುವ ಟ್ರಂಪ್ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದ ಪೋಪ್, ಯಾವ ವ್ಯಕ್ತಿ ಜನರ ನಡುವೆ ಸೇತುವೆ ಬದಲಿಗೆ ತಡೆಗೋಡಿ ನಿರ್ಮಿಸಲು ಮುಂದಾಗುತ್ತಾನೋ ಅವರು ಕ್ರೈಸ್ತನಲ್ಲ ಎಂದು ಟೀಕಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin