ಎಂಇಎಸ್ ಪುಂಡಾಟಕ್ಕೆ ಕಡಿವಾಣ : ರಾಜ್ಯದ ಗಡಿಯಲ್ಲಿ ಬಿಗಿ ಭದ್ರತೆ, ಮಹಾರಾಷ್ಟ್ರದ 150 ಮಂದಿಗೆ ತಡೆ

ಈ ಸುದ್ದಿಯನ್ನು ಶೇರ್ ಮಾಡಿ

MES--0

ಬೆಳಗಾವಿ, ಮೇ 25- ಎಂಇಎಸ್ ರ್ಯಾಲಿಗೆ ಆಗಮಿಸುತ್ತಿದ್ದ ಮಹಾರಾಷ್ಟ್ರದ ಸಚಿವರಿಗೆ ಪ್ರತಿಬಂಧಕಾಜ್ಞೆ ಹೊರಡಿಸಿ ಜಿಲ್ಲೆ ಪ್ರವೇಶ ನಿರ್ಬಂಧಿಸಿದ ಹಿನ್ನೆಲೆಯಲ್ಲಿ ನಗರ ಹಾಗೂ ಜಿಲ್ಲೆಯ ಗಡಿ ಭಾಗದಲ್ಲಿ ಪೊಲೀಸ್ ಕಣ್ಗಾವಲು ಹಾಕಲಾಗಿದೆ. ರಾಜ್ಯದ ಗಡಿ ಪ್ರವೇಶಿಸುತ್ತಿರುವ ಪ್ರತಿ ವಾಹನ ಗಳನ್ನು ತೀವ್ರ ತಪಾಸಣೆ ಮಾಡಲಾಗುತ್ತಿದ್ದು ಸಾರಿಗೆ ಸಚಿವ ಸೇರಿದಂತೆ 150ಕ್ಕೂ ಹೆಚ್ಚು ಮಂದಿ ಯನ್ನು ಗಡಿಭಾಗ ದಾಟದಂತೆ ತಡೆಯಲಾಗಿದೆ.  ಎಂಇಎಸ್ ಪುಂಡಾಟ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರದ ಸಚಿವರಿಗೆ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಎನ್.ಜಯರಾಮ್ ಆದೇಶಿಸುವ ಮೂಲಕ ಕೆಚ್ಚೆದೆ ಪ್ರದರ್ಶಿಸಿದ್ದಾರೆ.ಮಹಾ ಸರ್ಕಾರದ ಆರೋಗ್ಯ ಸಚಿವ ದೀಪಕ್ ಸಾವಂತ್ ಹಾಗೂ ಸಾರಿಗೆ ಸಚಿವ ದಿವಾಕರ್ ರಾವುತ್ ಜಿಲ್ಲೆಯ ಗಡಿ ಪ್ರವೇಶಿಸದಂತೆ ಸಿಆರ್‍ಪಿಸಿ 1973 ಕಲಂ 144(3)ನಡಿಯಲ್ಲಿ ಪ್ರತಿಬಂಧಕಾಜ್ಞೆ ಜಾರಿ ಮಾಡಿದ ಕೆಚ್ಚೆದೆಯ ಡಿಸಿ ಎಂಬ ಮೆಚ್ಚುಗೆಗೆ ಇದೀಗ ಅವರು  ಪಾತ್ರರಾಗಿದ್ದಾರೆ.  ನ್ನೆ ರಾತ್ರಿ 8 ಗಂಟೆಯಿಂದ 27ರ ರಾತ್ರಿ 8 ಗಂಟೆವರೆಗೆ ಉಭಯ ಸಚಿವರಿಗೆ ನಿರ್ಬಂಧ ವಿಧಿಸ ಲಾಗಿದ್ದು ಇಂದು ನಾಡದ್ರೋಹಿ ಎಂಇಎಸ್‍ನಿಂದ ಇಲ್ಲಿ ಬೃಹತ್ ರ್ಯಾಲಿ ಆಯೋಜಿಸಲಾಗಿರುವ ಹಿನ್ನೆಲೆಯಲ್ಲಿ ಆದೇಶ ಹೊರಡಿಸಲಾಗಿದೆ.

ನಾಡದ್ರೋಹಿ ರ್ಯಾಲಿಯಲ್ಲಿ ಭಾಗವಹಿಸಲು ಆಗಮಿಸಲಿರುವ ಮಹಾ ಸಚಿವರು ಕನ್ನಡ ಭಾಷೆ ವಿರುದ್ದ ಪ್ರಚೋದನಾತ್ಮಕ ಭಾಷಣ ಮಾಡಿ ದ್ವೇಷಮಯ ವಾತಾವರಣ ನಿರ್ಮಾಣ ಮಾಡುವ ಸಂಭವದ ಹಿನ್ನೆಲೆಯಲ್ಲಿ ಡಿಸಿ ಎನ್.ಜಯರಾಮ್ ಅವರು ಈ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಡಿಸಿ ಎನ್. ಜಯರಾಮ ಅವರ ನಿರ್ಧಾರವನ್ನು ಕನ್ನಡಪರ ಸಂಘಟನೆಗಳು ಸ್ವಾಗತಿಸಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin