ಎಂದಿನಂತೆ ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ ‘ನಡೆದಾಡುವ ದೇವರು’

ಈ ಸುದ್ದಿಯನ್ನು ಶೇರ್ ಮಾಡಿ

Siddaganga-Swamiji

ತುಮಕೂರು, ಮೇ 25- ಅನಾರೋಗ್ಯದ ಹಿನ್ನೆಲೆಯಲ್ಲಿ ವಿಶ್ರಾಂತಿಯಲ್ಲಿದ್ದ ನಡೆದಾಡುವ ದೇವರು, ತ್ರಿವಿಧ ದಾಸೋಹಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರು ಮಠದ ಆವರಣದಲ್ಲಿ ಎಂದಿನಂತೆ ಓಡಾಡುತ್ತ ಭಕ್ತರಿಗೆ ದರ್ಶನ ನೀಡಿದರು. ಶ್ರೀಗಳು ಚೇತರಿಸಿಕೊಂಡಿರುವುದರಿಂದ ಮಠದಲ್ಲಿ ಒಂದು ರೀತಿಯ ಸಂಭ್ರಮದ ವಾತಾವರಣ ಮನೆ ಮಾಡಿತ್ತು.ನಿನ್ನೆ ಸಂಜೆ 5.30ರ ವೇಳೆಗೆ ಸುಮಾರು ಅರ್ಧ ತಾಸಿಗೂ ಹೆಚ್ಚು ಕಾಲ ಲವಲವಿಕೆಯಿಂದ ಮಠದ ಜಮೀನು ಮತ್ತು ತೋಟದಲ್ಲಿ ಸುತ್ತಾಡಿ ನಂತರ ಮಠದ ದಾಸೋಹ ಮಂಟಪದ ಮುಂಭಾಗವಿರುವ ತಮ್ಮ ಮಂಚದ ಮೇಲೆ ಆಸೀನರಾಗಿ ಭಕ್ತರಿಗೆ ದರ್ಶನ ನೀಡಿದರು. ಶ್ರೀಗಳ ದರ್ಶನದಿಂದ ಭಕ್ತಾದಿಗಳು,ಮಠದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin