ವಿಶ್ವದಲ್ಲೇ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ..!

ಈ ಸುದ್ದಿಯನ್ನು ಶೇರ್ ಮಾಡಿ

Indian-Population

ಬೀಜಿಂಗ್/ನವದೆಹಲಿ, ಮೇ 25– ವಿಶ್ವದಲ್ಲೇ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಯಾವುದು ? ಭಾರತ ಅಥವಾ ಚೀನಾ ? ಎಂಬ ಪ್ರಶ್ನೆಗಳಿಗೆ ಗೊಂದಲ ಮತ್ತು ವಿವಾದಾತ್ಮಕ ಉತ್ತರಗಳಿರುವಾಗಲೇ ಖ್ಯಾತ ಸಂಶೋಧಕರೊಬ್ಬರು ಪ್ರಪಂಚದ ಅತ್ಯಂತ ಜನ ಬಾಹುಳ್ಯವಿರುವ ದೇಶ ಭಾರತ ಎಂದು ಹೇಳಿದ್ದಾರೆ.   ಅಮೆರಿಕದ ವಿಸ್ಕೋನ್‍ಸಿನ್-ಮ್ಯಾಡಿಸನ್ ವಿಶ್ವವಿದ್ಯಾಲಯದ ಸಂಶೋಧಕ ಯೀ ಫುಕ್ಸಿಯಾನ್ ಅವರು ಚೀನಾದ ಅಧಿಕೃತ ಜನಸಂಖ್ಯೆ ಅಂದಾಜು ತಪ್ಪು, ಈಗ ವಿಶ್ವದ ಅತ್ಯಂತ ಜನರಿರುವ ದೇಶ ಭಾರತ ಎಂದು ತಿಳಿಸಿದ್ದಾರೆ.ಚೀನಾದಲ್ಲಿ 1991-2016ರಿಂದ 337.6 ದಶಲಕ್ಷ ಹೊಸ ಜನರಿದ್ದಾರೆ. ಇದು 464.8 ದಶಲಕ್ಷ ಅಧಿಕೃತ ಅಂಕಿ-ಅಂಶಗಳಿಗಿಂತ ತುಂಬಾ ಕಡಿಮೆ ಇದರರ್ಥ ಏನೆಂದರೆ ಚೀನಾ ಅಧಿಕೃತ ಜನಸಂಖ್ಯೆ ಪ್ರಸ್ತುತ ಅಂದಾಜು ಅಂದರೆ 1.38 ಶತಕೋಟಿ ಲೆಕ್ಕಚಾರ ತಪ್ಪು ವಾಸ್ತವವಾಗಿ ಅದು 1.29 ಶತಕೋಟಿ ಎಂದು ಯೀ ಹೇಳಿಕೆಯನ್ನು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಉಲ್ಲೇಖಿಸಿದೆ.

ಭಾರತ ಈಗ 1.32 ಶತಕೋಟಿ ಜನಸಂಖ್ಯೆ ಹೊಂದಿದೆ. ಚೀನಾದಲ್ಲಿರುವ ಜನರ ಸಂಖ್ಯೆ 1.29 ಶತಕೋಟಿ. ಹೀಗಿರುವಾಗ ಭಾರತಕ್ಕಿಂತ ಚೀನಾದಲ್ಲಿ ಜನಸಂಖ್ಯೆ ಹೆಚ್ಚಾಗಿರಲು ಹೇಗೆ ಸಾಧ್ಯ ? ಎಂದು ಪ್ರಶ್ನಿಸಿರುವ ಅವರು ಅಂಕಿ-ಅಂಶಗಳನ್ನು ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin