ಸಿಆರ್‍ಪಿಎಫ್, ಎಸ್‍ಒಜಿ ಶಿಬಿರಗಳ ಮೇಲೆ ಉಗ್ರರ ದಾಳಿ, ಕೆಲವರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

CRPF-01

ಶೋಪಿಯಾನ್, ಮೇ 24-ಭಾರೀ ಬಿಗಿಭದ್ರತೆಯ ನಡುವೆಯೂ ಕಾಶ್ಮೀರ ಕಣಿವೆಯಲ್ಲಿ ಉಗ್ರರ ದಾಳಿ ಮುಂದುವರಿದಿದೆ. ಶೋಪಿಯಾನ್‍ನಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್‍ಪಿಎಫ್) ಹಾಗೂ ವಿಶೇಷ ಕಾರ್ಯಾಚರಣೆ ಸಮೂಹ (ಎಸ್‍ಒಜಿ) ಶಿಬಿರದ ಬಳಿ ಭಯೋತ್ಪಾದಕರು ನಡೆಸಿದ ಗ್ರೆನೇಡ್ ದಾಳಿಯಲ್ಲಿ ಕೆಲವರಿಗೆ ಗಾಯಗಳಾಗಿದೆ.  ಶೋಪಿಯಾನ್‍ನ ಇಮಾಮ್ ಸಾಹಿಬ್‍ನಲ್ಲಿರುವ ಶಿಬಿರದ ಮೇಲೆ ಭಯೋತ್ಪಾದಕರು ಗ್ರೆನೇಡ್ ಎಸೆದರು.

ಆದರೆ ಗುರಿ ತಪ್ಪಿ ಅದು ಶಿಬಿರದ ಪಕ್ಕದಲ್ಲಿದ್ದ ರಸ್ತೆಯಲ್ಲಿ ಸ್ಫೋಟಗೊಂಡು ಕೆಲವು ನಾಗರಿಕರು ಗಾಯಗೊಂಡರು. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಗ್ರರು ಎಸೆದ ಗ್ರೆನೇಡ್ ಗುರಿ ತಪ್ಪಿದ್ದರಿಂದ ಸಂಭವಿಸಬಹುದಾಗಿದ್ದ ಯೋಧರ ಮತ್ತೊಂದು ಮಾರಣಹೋಮ ತಪ್ಪಿದಂತಾಗಿದೆ.

Facebook Comments

Sri Raghav

Admin