ಹುಬ್ಬಳ್ಳಿಯಲ್ಲಿ ‘ಶೋಷಿತರೆಡೆಗೆ ನಮ್ಮ ನಡಿಗೆ’ ಅಭಿಯಾನಕ್ಕೆ ಬಿಎಸ್‍ವೈ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa

ಹುಬ್ಬಳ್ಳಿ , ಮೇ 25- ಡಾ. ಬಿ.ಆರ್ ಅಂಬೇಡ್ಕರ ಅವರನ್ನು ಕಾಂಗ್ರೆಸ್ ಕೆಟ್ಟದಾಗಿ ನಡೆಸಿಕೊಂಡಿದೆ. ಅಂಬೇಡ್ಕರ ಅವರ ಶವ ಸಂಸ್ಕಾರಕ್ಕೆ ರಾಜ್‍ಘಾಟ್‍ನಲ್ಲಿ ಅವಕಾಶ ಕೊಟ್ಟಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.  ಬಿಜೆಪಿಯ ಶೋಷಿತರೆಡೆಗೆ ನಮ್ಮ ನಡಿಗೆ ಅಭಿಯಾನದ ಹಿನ್ನೆಲೆ ಯಲ್ಲಿ ನಗರದ ಕರ್ಕಿ ಬಸವೇಶ್ವರ ನಗರದ ದಲಿತರೊಂದಿಗೆ ಸಂವಾದ ಕಾರ್ಯಕ್ರಮ ಸಭೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷ ಅಂಬೇಡ್ಕರ ಅವರನ್ನು ಹೇಗೆ ನಡೆಸಿಕೊಂಡಿದೆ ಎಂಬುದನ್ನು ಮನೆ ಮನೆಗೆ ತಲುಪಿಸಬೇಕು. ಇಡೀ ಜಗತ್ತೆ ಮೆಚ್ಚುವಂತಹ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಾರೆ. ದಲಿತರ ಉದ್ದಾರಕ್ಕೆ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಸರ್ಕಾರ ಬೇಕಾದರೆ ಯಾವ ತನಿಖೆಯನ್ನಾದರೂ ನಡೆಸಲಿ. ಅದಕ್ಕೆ ನಾನು ಸಿದ್ಧ. ಜನರ ತೀರ್ಪು ಏನು ಎಂಬುದನ್ನು ತಿಳಿಯಬೇಕಾದರೆ ಕೂಡಲೇ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗೋಣ ಎಂದು ಸಿಎಂಗೆ ಸವಾಲು ಹಾಕಿದರು.
ಈ ಸರ್ಕಾರ ಇಷ್ಟು ಬೇಗ ಹೋಗುತ್ತದೋ ಅಷ್ಟು ಬೇಗ ಜನರಿಗೆ ಒಳ್ಳೆಯದಾಗುತ್ತದೆ. ಬಿಜೆಪಿಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಮುಂದಿನ ಚುನಾವಣೆಯಲ್ಲಿ 150ಕ್ಕೂ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಅವರು ಹೇಳಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ದಲಿತ ವಿರೋಧಿಯಾಗಿದ್ದು, ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿದ್ದಾರೆ. ದಲಿತರ ಮನೆಯಲ್ಲಿ ಉಪಾಹಾರ ಮಾಡಿದರೆ ಅನವಶ್ಯಕವಾಗಿ ಟೀಕಿಸುತ್ತಿದ್ದಾರೆ ಎಂದರು.

ಭೇಟಿಗೆ ನಾಯಕರ ದಂಡು:

ಮುಂದಿನ 2018ರ ಚುನಾವಣೆಗೆ ಸಂಬಂಧಿಸಿದಂತೆ ತಮಗೇ ಟಿಕೆಟ್ ನೀಡಬೇಕೆಂದು ಕೆಲವರು ಯಡಿಯೂರಪ್ಪನವರನ್ನು ಭೇಟಿ ಮಾಡಿ ಬೇಡಿಕೆ ಪಟ್ಟಿ ನೀಡಿದರು.  ತಡರಾತ್ರಿ ಹುಬ್ಬಳ್ಳಿಗೆ ಆಗಮಿಸಿದ ಯಡಿ ಯೂರಪ್ಪ ಖಾಸಗಿ ಹೊಟೇಲ್‍ನಲ್ಲಿ ತಂಗಿದ್ದರು, ಉತ್ತರ ಕರ್ನಾಟಕ ಕೆಲ ಭಾಗದ ಜಿಲ್ಲೆಗಳ ನಾಯಕರು ಟಿಕೆಟ್ ಆಕಾಂಕ್ಷಿಗಳು ತಮ್ಮ ಬೆಂಬಲಿಗರ ಜೊತೆಯಾಗಿ ಭೇಟಿಯಾಗಿದ್ದು ಗಮನ ಸೆಳೆಯಿತು. ಮಾಜಿ ಶಾಸಕ ಅಶೋಕ ಕಾಟವೆ, ವೀರಭದ್ರಪ್ಪ ಹಾಲಹರವಿ, ಎಸ್‍ಐ ಚಿಕ್ಕನಗೌಡರ, ಶಂಕರಪಾಟೀಲ್ ಮುನೇನಕೊಪ್ಪ, ಸೇರಿದಂತೆ ಅನೇಕ ಮುಖಂಡರು ಕೆಲ ಸಮಯ ಪ್ರತ್ಯೇಕವಾಗಿ ಚರ್ಚಿಸಿದ್ದು ವಿಶೇಷವಾಗಿತ್ತು.
ಯಡಿಯೂರಪ್ಪನವರು ಕೆಜೆಪಿಯನ್ನು ಬಿಜೆಪಿ ಜತೆ ವಿಲೀನಗೊಳಿಸಿದ ನಂತರ ಈ ಭಾಗದ ಕೆಲವರು ತಟಸ್ಥರಾಗಿ ಉಳಿದಿದ್ದರು.    ಆದರೆ ಈಗ ಚುನಾವಣೆ ಹತ್ತಿರವಾಗುತ್ತಿ ದ್ದಂತೆ ಬಿಜೆಪಿಯಿಂದ ಈಗಾಗಲೇ ಯಡಿಯೂರಪ್ಪ ನವರೇ ಮುಂದಿನ ಮುಖ್ಯ ಮಂತ್ರಿ ಅಭ್ಯರ್ಥಿ ಎಂದು ಘೋಷಿಸಿರುವುದರಿಂದ ಈ ಭಾಗದ ಕಮಲ ಪಾಳಯದಲ್ಲಿ ಸಹಜವಾಗಿಯೇ ಸಂಚಲನ ಮೂಡಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin