ಹೆಲಿಕಾಪ್ಟರ್ ಪತನ : ‘ಮಹಾ’ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರಾಣಾಪಾಯದಿಂದ ಪಾರು

ಈ ಸುದ್ದಿಯನ್ನು ಶೇರ್ ಮಾಡಿ

Helicaptor--01

ಮುಂಬೈ, ಮೇ 25-ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿದ್ದ ಹೆಲಿಕಾಪ್ಟರ್ ಮೇಲೇರುವಾಗ ತಾಂತ್ರಿಕ ದೋಷದಿಂದ ರಭಸವಾಗಿ ನೆಲಕ್ಕೆ ಅಪ್ಪಳಿಸಿ ಅವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ಘಟನೆ ಲಾತೂರ್‍ನಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ. ಲಾತೂರ್‍ನ ನೀಲಾಂಗ ಹೆಲಿಪ್ಯಾಡ್‍ನಿಂದ ಮೇಲೆರಿದ ಹೆಲಿಕಾಪ್ಟರ್‍ನಲ್ಲಿ ದೋಷ ಕಂಡುಬಂದಿತು. ಈ ಸಂದರ್ಭದಲ್ಲಿ ಪೈಲೆಟ್ ತುರ್ತು ಭೂಸ್ಪರ್ಶ ಮಾಡಲು ಯತ್ನಿಸಿದಾಗ ಅದು ಕ್ರ್ಯಾಶ್ ಲ್ಯಾಂಡಿಂಗ್ (ಹಠಾತ್ ನೆಲಕ್ಕೆ ಇಳಿಯುವಿಕೆ) ಆಯಿತು. ಅದೃಷ್ಟವಶಾತ್ ಯಾರಿಗೂ ಅಪಾಯ ಸಂಭವಿಸಲಿಲ್ಲ.


ನಾನು, ನನ್ನೊಂದಿಗಿದ್ದ ಸಿಬ್ಬಂದಿ ಮತ್ತು ಪೈಲೆಟ್ ಅಪಾಯದಿಂದ ಪಾರಾಗಿದ್ದೇವೆ. ಯಾರಿಗೂ ಗಾಯಗಳಾಗಿಲ್ಲ. ನಾವೆಲ್ಲ ಸುರಕ್ಚಿತವಾಗಿದ್ದೇವೆ. ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ದೇವೇಂದ್ರ ಫಡ್ನವೀಸ್ ಟ್ವೀಟ್‍ನಲ್ಲಿ ಹೇಳಿದ್ದಾರೆ. ನಂತರ ಮುಖ್ಯಮಂತ್ರಿ ಅವರು ಅಧಿಕೃತ ಕಾರ್ಯಕ್ರಮದಲ್ಲಿ ಭಾಗವಹಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಯಿತು.

 

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin