‘ಎಸಿ ಅಳವಡಿಸಿರುವುದರಿಂದ ಕಲಾಪದಲ್ಲಿ ಭಾಗವಿಸಲಾಗುತ್ತಿಲ್ಲ’ : ಅಂಬಿ ಕೊಟ್ಟ ಸ್ಪಷ್ಟನೆ ಇದು

ಈ ಸುದ್ದಿಯನ್ನು ಶೇರ್ ಮಾಡಿ

Ambarish--01

ಬೆಂಗಳೂರು,ಮೇ 26-ವಿಧಾನಸಭೆಯ ಕಲಾಪದ ವೇಳೆ ಅತಿಯಾದ ಹವಾನಿಯಂತ್ರಿತ(ಎಸಿ) ಅಳವಡಿಸಿರುವ ಕಾರಣ ಕಲಾಪದಲ್ಲಿ ಭಾಗವಹಿಸಲು ನನಗೆ ಸಾಧ್ಯವಾಗುತ್ತಿಲ್ಲ. ಮಾಜಿ ಸಚಿವ ಹಾಗೂ ಮಂಡ್ಯ ಶಾಸಕ ಅಂಬರೀಶ್ ಅವರು ಸ್ಪೀಕರ್ ಕೆ.ಬಿ.ಕೋಳಿವಾಡ ಕೇಳಿರುವ ಸ್ಪಷ್ಟನೆಗೆ ನೀಡಿರುವ ಉತ್ತರ ಇದು. ಪದೇ ಪದೇ ಕಲಾಪಕ್ಕೆ ಗೈರು ಹಾಜರಾಗುತ್ತಿರುವ ಅಂಬರೀಶ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಮುಖಂಡರೊಬ್ಬರು ದೂರು ನೀಡಿದ್ದರು.ಈ ದೂರಿನನ್ವಯ ಸ್ಪಷ್ಟನೆ ಕೇಳಿ ಸ್ಪೀಕರ್ ಅವರು ಅಂಬರೀಶ್‍ಅವರಿಗೆ ಪತ್ರ ಬರೆದಿದ್ದರು. ಇದೀಗ ಸ್ಪೀಕರ್ ಅವರಿಗೆ ಬರೆದಿರುವ ಪತ್ರಕ್ಕೆ ಉತ್ತರಿಸಿರುವ ರೆಬೆಲ್ ಸ್ಟಾರ್, ನನಗೆ ಅನಾರೋಗ್ಯದ ಕಾರಣ ಎಸಿಯಲ್ಲಿ ಕೂರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಲಾಪದ ವೇಳೆ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.   2016 ಜೂನ್ ತಿಂಗಳಿನಿಂದ ಅಂಬರೀಶ್ ಈವರೆಗೆ ಕಲಾಪದಲ್ಲಿ ಪಾಲ್ಗೊಳ್ಳುತ್ತಿಲ್ಲ. ಯಾವುದೇ ಒಬ್ಬ ಶಾಸಕ ಕನಿಷ್ಟ 6 ತಿಂಗಳೊಳಗೆ ಒಂದು ಬಾರಿಯಾದರೂ ವಿಧಾನಮಂಡಲದ ಉಭಯ ಸದನಗಳಿಗೆ ಗೈರು ಹಾಜರಾದರೆ ಅಂಥವರ ವಿರುದ್ಧ ಕ್ರಮ ಜರುಗಿಸುವ ಪರಮೋಚ್ಛ ಅಧಿಕಾರ ಸ್ಪೀಕರ್ ಹಾಗೂ ಸಭಾಪತಿಗಳಿಗೆ ಇರುತ್ತದೆ.

ಕೋಳಿವಾಡಗೆ ಸ್ಪಷ್ಟನೆ ನೀಡಿರುವ ಅಂಬರೀಶ್ ನಾನು ಉದ್ದೇಶಪೂರ್ವಕವಾಗಿ ಕಲಾಪಕ್ಕೆ ಗೈರು ಹಾಜರಾಗಿಲ್ಲ. ಕಳೆದ ವರ್ಷ ಸಿಂಗಾಪುರದಲ್ಲಿ ಶಸ್ತ್ರ ಚಿಕಿತ್ಸೆ ಪಡೆದಿದ್ದೆ. ನಾನು ಎಸಿಯಲ್ಲಿ ಹೆಚ್ಚು ಸಮಯ ಕೂರುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ನನ್ನ ಒಬ್ಬನ ಹಿತದೃಷ್ಟಿಯಿಂದ ಸದನದಲ್ಲಿ ಎಸಿಯನ್ನು ತೆಗೆದು ಹಾಕಿ ಉಳಿದ ಸದಸ್ಯರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ನಾನು ಸದನಕ್ಕೆ ಹಾಜರಾಗಿಲ್ಲ ಎಂದು ಸಮಜಾಯಿಷಿ ಉತ್ತರ ನೀಡಿದ್ದಾರೆ. ‘

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin