ದೇಶದ ಅತಿ ಉದ್ದದ ಸೇತುವೆ ಲೋಕಾರ್ಪಣೆ

ಈ ಸುದ್ದಿಯನ್ನು ಶೇರ್ ಮಾಡಿ

Modi-Brige--01

ಸಾದಿಯಾ(ಅಸ್ಸಾಂ), ಮೇ 26-ಈಶಾನ್ಯ ಭಾರತದ ಜೀವನದಿ ಬ್ರಹ್ಮಪುತ್ರದ ಉಪನದಿಯಾದ ಲೋಹಿತ ನದಿಗೆ ಅಡ್ಡಲಾಗಿ ನಿರ್ಮಿಸಿರುವ ದೇಶದ ಅತಿ ಉದ್ದದ ಸೇತುವೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಲೋಕಾರ್ಪಣೆ ಮಾಡಿದರು. ಈ ಸೇತುವೆ ಉದ್ಘಾಟನೆಯಿಂದ ಸಮರ ಟ್ಯಾಂಕ್‍ಗಳ ಸುಗಮ ರವಾನೆಗೆ ಅನುಕೂಲವಾಗಲಿದ್ದು, ಭಾರತದ ಸೇನೆಗೆ ಶಕ್ತಿ ತುಂಬಲಿದೆ.9.3 ಕಿ.ಮೀ. ಉದ್ದದ ಈ ಸೇತುವೆ ಅರುಣಾಚಲ ಪ್ರದೇಶದ ದೋಲಾ ಮತ್ತು ಅಸ್ಸಾಂನ ಸಾಧಿಯಾ ಪಟ್ಟಣಗಳ ನಡುವೆ ಸಂಪರ್ಕ ಕಲ್ಪಿಸಲಿದೆ. ಅಲ್ಲದೇ ಭಾರೀ ತೂಕದ ಯುದ್ದ ಟ್ಯಾಂಕ್‍ಗಳನ್ನು ಈಶಾನ್ಯಭಾರತದ ರಾಜ್ಯಗಳಿಗೆ ನಿಯೋಜಿಸಲು ಈ ಬಲಿಷ್ಠ ಸೇತುವೆ ನೆರವಾಗಲಿದೆ. ಚೀನಾ ಪದೇ ಪದೇ ಒಡ್ಡುತ್ತಿರುವ ಬೆದರಿಕೆಗಳಿಗೆ ಉತ್ತರ ನೀಡಲು ಸಹ ಈ ಬ್ರಿಡ್ಜ್ ಸಹಕಾರಿಯಾಗಲಿದೆ.

DAsZXTgXUAAKC26 DAuFGBjXYAAqkUn

ಅಸ್ಸಾಂನ ತಿನ್‍ಸುಕಿಯಾ ಜಿಲ್ಲೆಯಾ ಸಾದಿಯಾದಲ್ಲಿ 2,065 ಕೋಟಿ ರೂ. ವೆಚ್ಚದಲ್ಲಿ ನಿರ್ಮಾನವಾಗಿರುವ ಈ ಸೇತುವೆಯ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ, ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್, ಮುಖ್ಯಮಂತ್ರಿ ಸರ್ಬಾನಂದಾ ಸೋನೊವಾಲ್ ಹಾಗೂ ಸರ್ಕಾರದ ಉನ್ನತಾಧಿಕಾರಿ ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin