ನೀರು ಕುಡಿಯಲು ನದಿಗಿಳಿದಾಗ ಮೊಸಳೆ ಎಳೆದೊಯ್ದಿದ್ದ ಯುವಕನ ಶವ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Muddebiha--01

ಮುದ್ದೆಬಿಹಾಳ,ಮೇ 26- ನೀರು ಕುಡಿಯಲು ನದಿಗಿಳಿದ ಕುರಿ ಕಾಯುವ ಯುವಕನೊಬ್ಬನನ್ನು ನಿನ್ನೆ ಮೊಸಳೆ ಎಳೆದೊಯ್ದ ಘಟನೆ ನಡೆದಿದ್ದು , ಇಂದು ಬೆಳಗ್ಗೆ ಶವ ಪತ್ತೆಯಾಗಿದೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಬಂಗಾರಗುಂಡ ಗ್ರಾಮದ ಯುವಕ 19 ವರ್ಷದ ಬಸವರಾಜ್ ಮಾದರ ನಿನ್ನೆ ಮಧ್ಯಾಹ್ನ ಕೃಷ್ಣಾನದಿಯಲ್ಲಿ ನೀರು ಕುಡಿಯಲು ಇಳಿದಿದ್ದ. ಈ ಸಂದರ್ಭ ಅವನನ್ನು ಮೊಸಳೆ ಕಚ್ಚಿ ಎಳೆದೊಯ್ದಿತ್ತು. ಸುದ್ದಿ ತಿಳಿದ ತಕ್ಷಣ ಧಾವಿಸಿದ ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಮತ್ತು ಪೊಲೀಸರು, ನೀರು ಮುಳುಗು ತಜ್ಞರು ಮತ್ತು ಸ್ಥಳೀಯರ ನೆರವಿನೊಂದಿಗೆ ಬಸವರಾಜುಗಾಗಿ ಹಾಯಿದೋಣಿ ಮೂಲಕ ತಹಸೀಲ್ದಾರ್ ಎಂ.ಎಸ್.ಭಗವಾನ್ ಅವರ ನೇತೃತ್ವದಲ್ಲಿ ಶೋಧ ಕಾರ್ಯ ಆರಂಭಿಸಿದರು.ಇಡೀ ರಾತ್ರಿ ಸಿಬ್ಬಂದಿ ಹುಡುಕಾಟ ನಡೆಸಿತ್ತು. ಇಂದು ಬೆಳಗ್ಗೆ ಬಸವರಾಜು ರಕ್ತಸಿಕ್ತ ದೇಹ ಪತ್ತೆಯಾಗಿದೆ.   ಬಸವರಾಜ್ ಮಾದರ ಕುರಿ ಕಾಯಲು ಅರಣ್ಯಕ್ಕೆ ಹೋದವನು ಬಾಯಾರಿಕೆಯಿಂದ ನೀರು ಕುಡಿಯಲು ನದಿಗೆ ಇಳಿದಿದ್ದಾಗ ಈ ಘಟನೆ ನಡೆದಿತ್ತು. ಮುದ್ದೇಬಿಹಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಬಸವರಾಜ್ ದೇಹದ ಮೇಲೆಲ್ಲ ಮೊಸಳೆ ಕಚ್ಚಿದ ಗಾಯಗಳಾಗಿವೆ. ಬಸವರಾಜ್ ಹೆತ್ತವರು ಮತ್ತು ಬಂಧುಗಳ ರೋದನ ಮುಗಿಲು ಮುಟ್ಟಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin