ನೋಟ್ ಬ್ಯಾನ್’ನಿಂದಾಗಿ ಭಾರತದ ಆರ್ಥಿಕತೆಗೆ 5 ಲಕ್ಷ ಕೋಟಿ ರೂ. ಸಂದಾಯ

ಈ ಸುದ್ದಿಯನ್ನು ಶೇರ್ ಮಾಡಿ

note-ban

ನವದೆಹಲಿ, ಮೇ 26-ಕಾಳಧನ, ನಕಲಿ ನೋಟು ಮತ್ತು ಭ್ರಷ್ಟಾಚಾರ ನಿರ್ಮೂಲನೆಗಾಗಿ ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ನವೆಂಬರ್ 8ರಂದು ಘೋಷಿಸಿದ 500 ಮತ್ತು 1,000 ರೂ.ಗಳ ನೋಟು ಅಮಾನ್ಯೀಕರಣದಿಂದ ಭಾರತೀಯ ಆರ್ಥಿಕತೆಗೆ 5 ಲಕ್ಷ ಕೋಟಿ ರೂ. ಸಂದಾಯವಾಗಿದೆ ಎಂದು ವರದಿಯೊಂದು ಹೇಳಿದೆ.   ನೋಟು ರದ್ದತಿ ನಂತರ ಭಾರತೀಯ ಆರ್ಥಿಕ ವ್ಯವಸ್ಥೆಗೆ ದೊಡ್ಡ ಮಟ್ಟದಲ್ಲಿ ಪ್ರಯೋಜನವಾಗಿದೆ. ಇದರಿಂದ ದೇಶದ ಕರೆನ್ಸಿ ಚಲಾವಣೆಯಲ್ಲಿ ಶೇ.86.4ರಷ್ಟು ಏರಿಕೆಯಾಗಿದೆ ಎಂದು ಸರ್ಕಾರದ ಉನ್ನತ-ಮಟ್ಟದ ಆಂತರಿಕ ಮೌಲ್ಯಾಂಕನ ವರದಿ ತಿಳಿಸಿದೆ.ಹಳೆ ನೋಟುಗಳ ರದ್ದತಿ ವೇಳೆ ದೇಶದ ಆರ್ಥಿಕತೆಯಲ್ಲಿ 17.77 ಲಕ್ಷ ಕೋಟಿ ರೂ.ಗಳ ಕರೆನ್ಸಿ ಚಲಾವಣೆಯಲ್ಲಿತ್ತು. ಅಮಾನ್ಯೀಕರಣದ ನಂತರ ಈ ವರ್ಷದ ಮೇ ತಿಂಗಳ 25ರವರೆಗೆ 19.25 ಲಕ್ಷ ಕೋಟಿ ರೂ.ಗಳು ಚಲಾವಣೆಯಲ್ಲಿವೆ ಎಂದು ವರದಿ ತಿಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin