ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟನೆ : ಗೋವಿಂದು ಮುಂದುವರಿಕೆಗೆ ಪಟ್ಟು

ಈ ಸುದ್ದಿಯನ್ನು ಶೇರ್ ಮಾಡಿ

Sarago

ಬೆಂಗಳೂರು, ಮೇ 26- ಚಲನಚಿತ್ರ ವಾಣಿಜ್ಯಮಂಡಳಿಯ ಹಗ್ಗಜಗ್ಗಾಟ ಮುಂದುವರೆದಿದ್ದು, ಒಂದು ಬಣ ವಾಣಿಜ್ಯ ಮಂಡಳಿಯ ಅಧ್ಯಕ್ಷರನ್ನು ಮುಂದುವರೆಸುವಂತೆ ಪಟ್ಟು ಹಿಡಿದರೆ, ಮತ್ತೊಂದು ಬಣ ಚುನಾವಣೆ ನಡೆಸುವಂತೆ ಒತ್ತಾಯಿಸುತ್ತಿದೆ.  ಈ ಹಿನ್ನೆಲೆಯಲ್ಲಿ ವಾಣಿಜ್ಯಮಂಡಳಿಯ ಮುಂದೆ ನಿನ್ನೆ ವಿರೋಧಿ ಬಣದ ಪ್ರತಿಭಟನೆ ನಡೆದಿದ್ದು, ಇಂದು ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಪರವಾಗಿ ನಿರ್ಮಾಪಕರು, ವಿತರಕರು, ಪ್ರದರ್ಶಕರು ಸೇರಿದಂತೆ ಎಲ್ಲರೂ ಒಗ್ಗೂಡಿ ಚುನಾವಣೆ ನಡೆಸದೆ ಅವರನ್ನು ಮುಂದುವರೆಸುವಂತೆ ಆಗ್ರಹಿಸಿದರು.ಚಲನಚಿತ್ರ ವಾಣಿಜ್ಯಮಂಡಳಿಗೆ ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ, ಸಾ.ರಾ.ಗೋವಿಂದು ಬಣದ ಕಾರ್ಯವೈಖರಿ ಉತ್ತಮವಾಗಿದ್ದು, ಚಿತ್ರೋದ್ಯಮಕ್ಕೆ ಅಗತ್ಯವಿರುವ ಎಲ್ಲ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವುದರಿಂದ ಅವರನ್ನೇ ಮುಂದುವರೆಸುವಂತೆ ಸುದ್ದಿಗೋಷ್ಠಿಯಲ್ಲಿ ಚರ್ಚಿಸಿ 9 ತಿಂಗಳ ಅವಧಿಗೆ ಅವರ ಅಧಿಕಾರವನ್ನು ಮುಂದುವರೆಸಲಾಗಿತ್ತು.  ಅದರ ಪ್ರಕಾರ ಮುಂದಿನ ಜೂನ್‍ನಲ್ಲಿ ಮಂಡಳಿಗೆ ಚುನಾವಣೆ ನಡೆಯಬೇಕಿತ್ತು. ಆದರೆ ಮತ್ತೆ ಅವರನ್ನೇ ಒಂದು ವರ್ಷಗಳ ಕಾಲ ಮುಂದುವರೆಸುವ ಬಗ್ಗೆ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಬಾಮಾಹರೀಶ್, ಜಯಸಿಂಹಮುಸುರಿ, ನಂದಿಹಾಳ್ ಸೇರಿದಂತೆ ಬಹಳಷ್ಟು ನಿರ್ಮಾಪಕರು ಒಗ್ಗೂಡಿ ಬೈಲಾದಂತೆ ಚುನಾವಣೆ ನಡೆಸಲು ಒತ್ತಾಯಿಸಿದ್ದರು.

ಇದಕ್ಕೆ ಅವಕಾಶ ನೀಡಬಾರದು ಎಂದು ಇಂದು ಖ್ಯಾತ ನಟ ಜಗ್ಗೇಶ್, ನಿರ್ಮಾಪಕರಾದ ರಾಕ್‍ಲೈನ್ ವೆಂಕಟೇಶ್, ಮನೋಹರ್, ಎಂ.ಬಿ.ಬಾಬು, ಕೆ.ಮಂಜು, ಎ.ಗಣೇಶ್, ಜಯಣ್ಣ, ಎಸ್.ವಿ.ಬಾಬು, ಕೆ.ಪಿ.ಶ್ರೀಕಾಂತ್ ಸೇರಿದಂತೆ ನಿರ್ಮಾಪಕರು, ವಿತರಕರು ಎಲ್ಲರೂ ಒಗ್ಗೂಡಿ ವಾಣಿಜ್ಯ ಮಂಡಳಿ ಮುಂಭಾಗ ಪ್ರತಿಭಟನೆ ನಡೆಸಿ ಸಾ.ರಾ.ಗೋವಿಂದು ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಸಭೆಯಲ್ಲಿ ನಿರ್ಧಾರ:

ವಾಣಿಜ್ಯ ಮಂಡಳಿಯಲ್ಲಿ ಉದ್ಭವಿಸಿರುವ ಸಮಸ್ಯೆ ಕುರಿತಂತೆ ಜೂ.16ರಂದು ಸಭೆ ಕರೆದಿದ್ದು, ಅಂದು ಎಲ್ಲ ನಿರ್ಮಾಪಕರು, ವಿತರಕರು, ಪ್ರದರ್ಶಕರ ಸಮ್ಮುಖದಲ್ಲಿ ಚರ್ಚೆ ನಡೆಸಿ ಚುನಾವಣೆ ನಡೆಸಬೇಕೇ, ಬೇಡವೇ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ವಾಣಿಜ್ಯಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ತಿಳಿಸಿದ್ದಾರೆ.  ತಮಗೆ ಎಲ್ಲಾ ರೀತಿಯಿಂದಲೂ ಬೆಂಬಲ ನೀಡಿರವ ಚಿತ್ರೋದ್ಯಮ ಮಂದಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin