ಅಮ್ಮನವರ ಆರೋಗ್ಯದಲ್ಲಿ ಸುಧಾರಣೆ, ವದಂತಿಗಳಿಗೆ ಕಿವಿಗೊಡಬೇಡಿ : ಶಿವರಾಜಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

pArvatamma--01

ಬೆಂಗಳೂರು, ಮೇ 27- ಪಾರ್ವತಮ್ಮ ರಾಜ್‍ಕುಮಾರ್ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಶಿವರಾಜ್‍ಕುಮಾರ್ ಮನವಿ ಮಾಡಿದ್ದಾರೆ. ವೈದ್ಯರು ಎಲ್ಲ ರೀತಿಯ ಚಿಕಿತ್ಸೆ ನೀಡುತ್ತಿದ್ದಾರೆ. ಅವರಿಗೆ ಕಾಣಿಸಿಕೊಂಡಿದ್ದ ಜ್ವರ ಕೂಡ ವಾಸಿಯಾಗಿದೆ. ಸುಮ್ಮನೆ ಯಾವುದೋ ವೈದ್ಯಕೀಯ ಭಾಷೆಯನ್ನು ತಪ್ಪಾಗಿ ಅರ್ಥ ಮಾಡಿಕೊಂಡು ಆತಂಕ ಮೂಡಿಸುವಂತಹ ಕೆಲಸ ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುತ್ತಿವೆ. ದಯಮಾಡಿ ಇದನ್ನು ನಂಬಬೇಡಿ ಎಂದು ಶಿವರಾಜ್‍ಕುಮಾರ್ ಹೇಳಿದ್ದಾರೆ.ಐಸಿಯುನಲ್ಲಿ ಚಿಕಿತ್ಸೆ ನಡೆಯುತ್ತಿದೆ. ನಾನು ಅಮ್ಮನನ್ನು ನೋಡಲು ಹೋದಾಗ ಅವರು ಮಾತನಾಡಲು ಪ್ರಯತ್ನಿಸಿದರು. ಬಿಪಿ ನಾರ್ಮಲ್ ಆಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.  ಅಭಿಮಾನಿಗಳ ಶ್ರೀರಕ್ಷೆ ನಮ್ಮ ಮೇಲಿದೆ. ಅದನ್ನು ಅರ್ಥ ಮಾಡಿಕೊಂಡಿದ್ದೇನೆ. ದಯಮಾಡಿ ಸುಳ್ಳು ಮಾಹಿತಿಗಳನ್ನು ಸಾರ್ವಜನಿಕರು ಹಬ್ಬಿಸಬಾರದು ಎಂದು ಮನವಿ ಮಾಡಿದರು.  ಏನೇ ಬದಲಾವಣೆಯಾದರೂ ನಾನು ಎಲ್ಲರಿಗೂ ತಿಳಿಸುತ್ತೇನೆ. ವೈದ್ಯರಿಗೆ ಧೈರ್ಯವಾಗಿ ಚಿಕಿತ್ಸೆ ನೀಡುವಂತಹ ಶಕ್ತಿ ನೀಡಲಿ ಎಂದು ಶಿವರಾಜ್‍ಕುಮಾರ್ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin