ಗಡಿಯಲ್ಲಿ ನುಸುಳಲೆತ್ನಿಸಿದ ನಾಲ್ವರು ಉಗ್ರರ ಹತ್ಯೆ, ಅಪಾರ ಶಸ್ತಾಸ್ತ್ರಗಳು ವಶ

ಈ ಸುದ್ದಿಯನ್ನು ಶೇರ್ ಮಾಡಿ

Border-Firing--01

ಶ್ರೀನಗರ, ಮೇ 27- ದೇಶದೊಳಗೆ 20ಕ್ಕೂ ಹೆಚ್ಚು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ನುಸುಳಿ, ಭಾರೀ ವಿಧ್ವಂಸಕ ಕೃತ್ಯಗಳನ್ನು ಎಸಗಲಿದ್ದಾರೆಂಬ ಆತಂಕದ ನಡುವೆ ಕಾಶ್ಮೀರ ಕಣವೆಯಲ್ಲಿ ಉಗ್ರರ ಉಪಟಳ ಮತ್ತಷ್ಟು ಹೆಚ್ಚಾಗಿದೆ. ಜಮ್ಮು ಮತ್ತು ಕಾಶ್ಮೀರದ ರಾಮ್‍ಪುರ್ ವಲಯದಲ್ಲಿ ಉಗ್ರರ ಮತ್ತೊಂದು ನುಸುಳುವಿಕೆ ಯತ್ನವನ್ನು ವಿಫಲಗೊಳಿಸಿರುವ ಭಾರತೀಯ ಸೇನೆ ನಾಲ್ವರನ್ನು ಹತ್ಯೆಗೈದು, ಅಪಾರ ಶಸ್ತಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ.



ರಾಮ್‍ಪುರ್ ಸೆಕ್ಟರ್‍ನ ಗಡಿ ನಿಯಂತ್ರಣ ರೇಖೆ ಬಳಿ ಇಂದು ಮುಂಜಾನೆ ಉಗ್ರರ ಚಲನವಲನಗಳು ಕಂಡುಬಂದಿತು. ಅದರ ಬೆನ್ನಲ್ಲೇ ಒಳನುಸುಳುವಿಕೆಗೆ ಯತ್ನಿಸಿದರು. ಈ ಸಂದರ್ಭದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ನಾಲ್ವರು ಭಯೋತ್ಪಾದಕರು ಹತರಾದರು ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಸರ್ಜೀಕಲ್ ಸ್ಟ್ರೈಕ್ ಮತ್ತು ಪಾಕ್ ಸೇನಾ ಬಂಕರ್‍ಗಳನ್ನು ಧ್ವಂಸಗೊಳಿಸಿದ ಹೊರತಾಗಿಯೂ ಭಾರತೀಯ ಸೇನೆ ಮೇಲೆ ದಾಳಿ ನಡೆಸುವ ದುಸ್ಸಾಹಸಕ್ಕೆ ಕೈ ಹಾಕಿದ್ದ ಪಾಕಿಸ್ತಾನದ ಬಾರ್ಡರ್ ಆಕ್ಷನ್ ಟೀಮ್‍ಗೆ (ಬ್ಯಾಟ್) ಯೋಧರು ನಿನ್ನೆ ತಕ್ಕ ಪಾಠ ಕಲಿಸಿದ್ದರು. ಉರಿ ವಲಯದಲ್ಲಿ ಮತ್ತೊಂದು ನರಮೇಧಕ್ಕೆ ಯತ್ನಿಸಿದ್ದ ಇಬ್ಬರು ಉಗ್ರರನ್ನು ಸೈನಿಕರು ಹೊಡೆದುರುಳಿಸಿದ್ದರು.

ಕೆಲವು ದಿನಗಳ (ಮೇ 1) ಹಿಂದಷ್ಟೇ ಇದೇ ಇದೇ ಬ್ಯಾಟ್ ಉಗ್ರರ ಪಡೆ ಗಡಿಯೊಳಗೆ ನುಗ್ಗಿ ಇಬ್ಬರು ಉಗ್ರರ ಶಿರಚ್ಛೇದ ಮಾಡಿ ಪರಾರಿಯಾಗಿತ್ತು. ನಿನ್ನೆ ಬಿಎಸ್‍ಎಫ್ ಯೋಧರು ಭಯೋತ್ಪಾದಕರನ್ನು ಕೊಂದು ಸೇಡು ತೀರಿಸಿಕೊಂಡಿದೆ.   ಕಾಶ್ಮೀರದ ಗಡಿ ಭಾಗ ಸ್ಭೆರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಅವಿತಿಟ್ಟುಕೊಂಡಿರಬಹುದಾದ ಭಯೋತ್ಪಾದಕರಿಗಾಗಿ ಯೋಧರು ತೀವ್ರ ಶೋಧ ಮುಂದುವರಿಸಿದ್ದಾರೆ.


ಕಳೆದೊಂದು ವಾರದಲ್ಲಿ ಭಯೋತ್ಪಾದಕರಿಂದ ನುಸುಳುವಿಕೆ ಯತ್ನಗಳು ಗಮನಾರ್ಹವಾಗಿ ಹೆಚ್ಚಾಗುತ್ತಿದೆ. ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುತ್ತಿರುವುದು ಉಗ್ರರಿಗೆ ಅನುಕೂಲವಾಗಿದ್ದು, ಭಾರತದ ಗಡಿಯೊಳಗೆ ನುಸುಳುವಿಕೆಗೆ ಮಾರ್ಗ ಸುಗಮವಾಗಿದೆ ಎಂಬ ಆತಂಕವನ್ನು ಹಿರಿಯ ಸೇನಾಧಿಕಾರಿಯೊಬ್ಬರು ವ್ಯಕ್ತಪಡಿಸಿದ್ದಾರೆ.   ಗಡಿ ನಿಯಂತ್ರಣ ರೇಖೆ ಮತ್ತು ಉಗ್ರರು ನುಸುಳಲು ಸಾಧ್ಯವಿರುವ ಪ್ರದೇಶಗಳಲ್ಲಿ ಸೇನಾ ಪಹರೆಯನ್ನು ವiತ್ತಷ್ಟು ಬಿಗಿಗೊಳಿಸಲಾಗಿದ್ದು, ಪಹರೆಯನ್ನು ಹೆಚ್ಚಿಸಲಾಗಿದೆ ಎಂದು ಮೇಜರ್ ನೌರೆಲಾ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin