ಮುಂದಿನ ವಾರ ರಾಜ್ಯಾದ್ಯಂತ ಎಳೆಯರು ನಾವು ಗೆಳೆಯರು ಚಿತ್ರ ತೆರೆಗೆ

ಈ ಸುದ್ದಿಯನ್ನು ಶೇರ್ ಮಾಡಿ

eleyaru
ತೆರೆಯ ಮೇಲೆ ಮಕ್ಕಳ ಅಬ್ಬರ ಶುರುವಾಗಲಿದೆ. ಮುಂದಿನ ವಾರ ರಾಜ್ಯಾದ್ಯಂತ ಎಳೆಯರು ನಾವು ಗೆಳೆಯರು ಚಿತ್ರ ಬೆಳ್ಳಿ ಪರದೆಯನ್ನು ಅಲಂಕರಿಸುತ್ತಿದೆ.
ಡ್ರಾಮಾ ಜೂನಿಯರ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ 10 ಜನ ಮಕ್ಕಳು ಒಟ್ಟಿಗೇ ಅಭಿನಯಿಸಿ ರುವ ಈ ಚಿತ್ರವನ್ನು ವಿಕ್ರಂ ಸೂರಿ ನಿರ್ದೇಶನ ಮಾಡಿದ್ದಾರೆ. ಒಂದು ಕಮರ್ಷಿಯಲ್ ಚಿತ್ರವನ್ನು ಮಾಡುವ ತವಕವನ್ನು ಹೊಂದಿದ್ದ ನಿರ್ಮಾಪಕ ನಾಗರಾಜ್ ಗೋಪಾಲ್ ಬಹಳ ಆಲೋಚನೆ ಮಾಡಿ ಮಕ್ಕಳನ್ನು ಇಟ್ಟುಕೊಂಡು ಒಂದು ದೊಡ್ಡ ಮಟ್ಟದ ಚಿತ್ರವನ್ನು ಪ್ರೇಕ್ಷಕರಿಗೆ ನೀಡಬೇಕು ಎಂಬ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ.


 

ಸಾಮಾನ್ಯವಾಗಿ ಮಕ್ಕಳ ಚಿತ್ರವೆಂದರೆ ಲೋ ಬಜೆಟ್ ಚಿತ್ರ ಎಂಬ ವಾಡಿಕೆ ಇದೆ. ಆದರೆ ಅದನ್ನು ಬದಿಗೊತ್ತಿ ಒಂದು ದೊಡ್ಡ ಮಟ್ಟದ ಚಿತ್ರವನ್ನು ತೆರೆಗೆ ಅರ್ಪಿಸಲು ಸನ್ನದ್ಧರಾಗಿದ್ದಾರೆ.  ಮೆಲೋಡಿಗೆ ಹೆಸರಾದ ಸಂಗೀತ ನಿರ್ದೇಶಕ ಅನೂಪ್ ಸಿಳೀನ್ ಅವರ ಸಂಗೀತ ಸಾರಥ್ಯದಲ್ಲಿ ಹೊರ ಬಂದಿರುವ ಈ ಚಿತ್ರದ 5 ಹಾಡುಗಳು ಈಗಾಗಲೇ ಕೇಳುಗರ ಹೃದಯವನ್ನು ಗೆದ್ದಿವೆ. ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಗೋಪಾಲ್, ಸಂಕಲನಕಾರ ಬಿ.ಎಸ್.ಕೆಂಪರಾಜು, ವಿತರಕ ಜಾಕ್ ಮಂಜು ಹಾಗೂ ಲೇಖಕ ರಿಚರ್ಡ್ ಲೂಯಿಸ್ ಅಲ್ಲದೆ ಪುಟಾಣಿಗಳಾದ ತೇಜಸ್ವಿನಿ, ಮಹತಿ ಹಾಗೂ ಪುಟ್ಟರಾಜು ಕೂಡ ಹಾಜರಿದ್ದರು.
ವಿತರಕ ಜಾಕ್ ಮಂಜು ಮಾತನಾಡಿ, ಆರಂಭದಲ್ಲಿ ಮಕ್ಕಳ ಸಿನಿಮಾ ಎಂದು ನಾನು ಆಸಕ್ತಿ ತೋರಿಸಲಿಲ್ಲ. ನಂತರ ನಿರ್ಮಾಪಕರ ಇನ್‍ವಾಲ್‍ಮೆಂಟ್ ನೋಡಿ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡುವ ನಿರ್ಧಾರ ಮಾಡಿದೆ. 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಇದೆ. ಕೆಲವರು ತಾವೇ ಫೋನ್ ಮಾಡಿ ಕೇಳಿದ್ದಾರೆ.  ಇಲ್ಲಿರುವ ಎಲ್ಲಾ ಮಕ್ಕಳು ನನ್ನ ಫೇವರೆಟ್. ಅವರಿಂದಾಗಿ ನಾನು ಥಿಯೇಟರ್ ಹುಡುಕುವುದು ತಪ್ಪಿದೆ. ಈ ಸಿನಿಮಾ ಖಂಡಿತ ಕಮರ್ಷಿ ಯಲ್ ಆಗಿ ಹಿಟ್ ಆಗುತ್ತದೆ ಎಂದು ಹೇಳಿದರು.  ಉಳಿದಂತೆ ಬಂದಂತಹ ಚಿತ್ರ ತಂಡದ ಕಲಾವಿದರು ಹಾಗೂ ತಂತ್ರಜ್ಞರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin