ರಾಜಕಾರಣದಲ್ಲಿ ಏನೂ ಬೇಕಾದರೆ ಬದಲಾವಣೆ ಆಗಬಹುದು : ಜಮೀರ್ ಅಹಮದ್

ಈ ಸುದ್ದಿಯನ್ನು ಶೇರ್ ಮಾಡಿ

Jameer-ahamad

ಗೌರಿಬಿದನೂರು, ಮೇ 27-ರಾಜಕಾರಣದಲ್ಲಿ ಏನು ಬೇಕಾದರೂ ಬದಲಾವಣೆಗಳು ಆಗಬಹುದು, ಅದಕ್ಕೆ ಆಶ್ಚರ್ಯ ಪಡುವಂತಿಲ್ಲ. ಮತದಾರರ ತೀರ್ಮಾನದ ಮುಂದೆ ಯಾರೂ ದೊಡ್ಡವರಲ್ಲ ಎಂದು ಜಿಡಿಎಸ್ ರೆಬೆಲ್ ಶಾಸಕ ಜಮೀರ್ ಅಹಮದ್ ಹೇಳಿದರು.  ಪಟ್ಟಣದ ಸಮೀಪದ ಹಿರೇಬಿದನೂರು ಗ್ರಾಮದಲ್ಲಿ ಸಮಾಜ ಸೇವಕ ಕೆ.ಜಯಪಾಲರೆಡ್ಡಿ ಅವರ 35ನೇ ಹುಟ್ಟುಹಬ್ಬ ಅಂಗವಾಗಿ ಉಚಿತ ಹೊಲಿಗೆ ಯಂತ್ರ, ವಿಕಲ ಚೇತನರಿಗೆ ತ್ರೈಸಿಕಲ್, ಹಾಗೂ ಯುವಕರಿಗೆ ಸೈಕಲ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜ ಸೇವೆ ಮಾಡುತ್ತಿರುವುದನ್ನು ಕೆಲವು ರಾಜಕಾರಣಿಗಳು ಅಡ್ಡಿಪಡಿಸುತ್ತಿರುವುದು ಸರಿಯಲ್ಲ, ಈ ಬಾರಿಯೂ ಚುನಾವಣೆಗೆ ಸ್ಪರ್ಧಿಸುವುದು ಖಚಿತ, ಜುಯಪಾಲರೆಡ್ಡಿಯವರ ಗೆಲುವು ಖಚಿತ ಎಂದರು.ಸಮಾಜ ಸೇವ ಕೆ.ಜಯಪಾಲರೆಡ್ಡಿ ಮಾತನಾಡಿ, ಕಳೆದೈದು ವರ್ಷಗಳಿಂದ ತಾಲೂಕಿನಲ್ಲಿ ಬಡವರ, ದಲಿತರ,ಅಲ್ಪ ಸಂಖ್ಯಾತರ ಕಷ್ಟಗಳಿಗೆ ಸ್ಪಂದಿಸಿಕೊಂಡು ಬರುತ್ತಿದ್ದೇನೆ. ಆದರೆ ನನ್ನ ಸೇವಾ ಕಾರ್ಯಕ್ಕೂ ಇಲ್ಲಿನ ರಾಜಕಾರಣಿಗಳು ಅಡ್ಡಿ ಪಡಿಸಿ, ಗಲಾಟೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮಕ್ಕೆ ಅಭಿಮಾನಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬಂದಿದ್ದರಿಂದ ನೂಕುನುಗ್ಗಲು ಉಂಟಾಯಿತಲ್ಲದೆ, ಗೌರಿಬಿದನೂರು-ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.  ಮುಖಂಡ ಸೂರಣ್ಣ, ನಿವೃತ್ತ ನಗರಾಭಿವೃದ್ದಿ ಅಧಿಕಾರಿ ರಘುನಾಥರೆಡ್ಡಿ, ಅಜಿತ್ ಜೈನ್, ಮಂಜುನಾಥ್, ಶಿವಣ್ಣ, ಶ್ರೀರಾಮರೆಡ್ಡಿ, ನವೀನ್‍ರೆಡ್ಡಿ, ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS   

Facebook Comments

Sri Raghav

Admin