ಹಿಜ್ಬುಲ್ ಸಂಘಟನೆಯ ಹತ ಬರ್ಹನ್ವಾನಿ ಉತ್ತರಾಧಿಕಾರಿ ಸೇರಿ 8 ಉಗ್ರರು ಫಿನಿಷ್

ಈ ಸುದ್ದಿಯನ್ನು ಶೇರ್ ಮಾಡಿ

Wani

ಶ್ರೀನಗರ, ಮೇ 27- ದೇಶ ದೊಳಗೆ 20ಕ್ಕೂ ಹೆಚ್ಚು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ನುಸುಳಿ, ಭಾರೀ ವಿಧ್ವಂಸಕ ಕೃತ್ಯಗಳನ್ನು ಎಸಗಲಿದ್ದಾರೆಂಬ ಆತಂಕದ ನಡುವೆ ಕಾಶ್ಮೀರ ಕಣವೆಯಲ್ಲಿ ಉಗ್ರರ ಉಪಟಳ ಮತ್ತಷ್ಟು ಹೆಚ್ಚಾಗಿದೆ. ಜಮ್ಮು ಮತ್ತು ಕಾಶ್ಮೀರದ ರಾಮ್‍ಪುರ್ ವಲಯ ಮತ್ತು ತ್ರಾಲ್‍ನಲ್ಲಿ ಉಗ್ರರ ಮತ್ತೆರಡು ನುಸುಳುವಿಕೆ ಯತ್ನಗಳನ್ನು ವಿಫಲಗೊಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.  ಕುಖ್ಯಾತ ಭಯೋತ್ಪಾದಕ ಬರ್ಹನ್ ವಾನಿ ಉತ್ತರಾಧಿಕಾರಿ ಸೇರಿದಂತೆ ಎಂಟು ಭಯೋ ತ್ಪಾದಕರನ್ನು ಹತ್ಯೆಗೈದು, ಅಪಾರ ಶಸ್ತಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿ ಕೊಂಡಿದೆ. ರಾಮ್‍ಪುರ್ ಸೆಕ್ಟರ್‍ನ ಗಡಿ ನಿಯಂತ್ರಣ ರೇಖೆ ಬಳಿ ಇಂದು ಮುಂಜಾನೆ ಉಗ್ರರ ಚಲನವಲನಗಳು ಕಂಡು ಬಂದಿತು. ಅದರ ಬೆನ್ನಲ್ಲೇ ಒಳ ನುಸುಳುವಿಕೆಗೆ ಯತ್ನಿಸಿದರು. ಈ ಸಂದರ್ಭದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ನಾಲ್ವರು ಭಯೋತ್ಪಾದಕರು ಹತರಾದರು ಎಂದು ಸೇನಾಧಿಕಾರಿ ಯೊಬ್ಬರು ತಿಳಿಸಿದ್ದಾರೆ.ಪುಲ್ವಾಮಾ ಜಿಲ್ಲೆಯ ತ್ರಾಲ್ ಪ್ರದೇಶದ ಮನೆಯೊಂದರಲ್ಲಿ ಅಡಗಿದ್ದ ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರಗಾಮಿಗಳನ್ನು ಹೊರ ಹಾಕಲು ಯೋಧರು ಕಾರ್ಯಾ ಚರಣೆಗಿಳಿದಾಗ ಗುಂಡಿನ ಚಕಮಕಿ ನಡೆಯಿತು. ಕಾಳಗದಲ್ಲಿ ಹಿಜ್ಬುಲ್ ಕಮಾಂಡರ್ ಸಬ್ಜಾರ್ ಸೇರಿ ಇಬ್ಬರು ಉಗ್ರರು ಹತರಾಗಿದ್ದು, ಭಾರೀ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.   ಸರ್ಜಿಕಲ್ ಸ್ಟ್ರೈಕ್ ಮತ್ತು ಪಾಕ್ ಸೇನಾ ಬಂಕರ್‍ಗಳನ್ನು ಧ್ವಂಸಗೊಳಿಸಿದ ಹೊರತಾಗಿಯೂ ಭಾರತೀಯ ಸೇನೆ ಮೇಲೆ ದಾಳಿ ನಡೆಸುವ ದುಸ್ಸಾಹಸಕ್ಕೆ ಕೈ ಹಾಕಿದ್ದ ಪಾಕಿಸ್ತಾನದ ಬಾರ್ಡರ್ ಆಕ್ಷನ್ ಟೀಮ್‍ಗೆ (ಬ್ಯಾಟ್) ಯೋಧರು ನಿನ್ನೆ ತಕ್ಕ ಪಾಠ ಕಲಿಸಿದ್ದರು. ಉರಿ ವಲಯದಲ್ಲಿ ಮತ್ತೊಂದು ನರಮೇಧಕ್ಕೆ ಯತ್ನಿಸಿದ್ದ ಇಬ್ಬರು ಉಗ್ರರನ್ನು ಸೈನಿಕರು ಹೊಡೆದುರುಳಿಸಿದ್ದರು.

ಕೆಲವು ದಿನಗಳ (ಮೇ 1) ಹಿಂದಷ್ಟೇ ಇದೇ ಇದೇ ಬ್ಯಾಟ್ ಉಗ್ರರ ಪಡೆ ಗಡಿಯೊಳಗೆ ನುಗ್ಗಿ ಇಬ್ಬರು ಉಗ್ರರ ಶಿರಚ್ಛೇದ ಮಾಡಿ ಪರಾರಿಯಾಗಿತ್ತು. ನಿನ್ನೆ ಬಿಎಸ್‍ಎಫ್ ಯೋಧರು ಭಯೋತ್ಪಾದಕರನ್ನು ಕೊಂದು ಸೇಡು ತೀರಿಸಿಕೊಂಡಿದೆ.   ಕಾಶ್ಮೀರದ ಗಡಿ ಭಾಗ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಅವಿತಿಟ್ಟುಕೊಂಡಿರ ಬಹುದಾದ ಭಯೋತ್ಪಾದಕರಿಗಾಗಿ ಯೋಧರು ತೀವ್ರ ಶೋಧ ಮುಂದುವರಿಸಿದ್ದಾರೆ.

ಕಳೆದೊಂದು ವಾರದಲ್ಲಿ ಭಯೋತ್ಪಾದಕರಿಂದ ನುಸುಳುವಿಕೆ ಯತ್ನಗಳು ಗಮನಾರ್ಹವಾಗಿ ಹೆಚ್ಚಾಗುತ್ತಿದೆ. ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುತ್ತಿರುವುದು ಉಗ್ರರಿಗೆ ಅನುಕೂಲವಾಗಿದ್ದು, ಭಾರತದ ಗಡಿಯೊಳಗೆ ನುಸುಳುವಿಕೆಗೆ ಮಾರ್ಗ ಸುಗಮವಾಗಿದೆ ಎಂಬ ಆತಂಕವನ್ನು ಹಿರಿಯ ಸೇನಾಧಿಕಾರಿಯೊಬ್ಬರು ವ್ಯಕ್ತಪಡಿಸಿದ್ದಾರೆ.   ಗಡಿ ನಿಯಂತ್ರಣ ರೇಖೆ ಮತ್ತು ಉಗ್ರರು ನುಸುಳಲು ಸಾಧ್ಯವಿರುವ ಪ್ರದೇಶಗಳಲ್ಲಿ ಸೇನಾ ಪಹರೆಯನ್ನು ವiತ್ತಷ್ಟು ಬಿಗಿಗೊಳಿಸಲಾಗಿದ್ದು, ಪಹರೆ ಯನ್ನು ಹೆಚ್ಚಿಸಲಾಗಿದೆ ಎಂದು ಮೇಜರ್ ನೌರೆಲಾ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin