ಸಾರ್ವಜನಿಕರೇ ಎಚ್ಛೆತ್ತುಕೊಳ್ಳಿ, ನಾಳೆ ಔಷಧಿ-ಊಟ, ತಿಂಡಿ ಸಿಗೊಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Closed-Bandh

ಬೆಂಗಳೂರು, ಮೇ 29- ಜಿಎಸ್‍ಟಿ ವಿರೋಧಿಸಿ ನಾಳೆ ಹೊಟೇಲ್ ಮಾಲೀಕರು ಬಂದ್ ಕರೆ ಕೊಟ್ಟಿದ್ದರೆ, ಆನ್‍ಲೈನ್‍ನಲ್ಲಿ ಔಷಧಿ ಖರೀದಿ ವಿರೋಧಿಸಿ ಮೆಡಿಕಲ್ ಶಾಪ್‍ನವರು ಬಂದ್‍ಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ನಾಳೆ ಹೊಟೇಲ್ ಮತ್ತು ಔಷಧಿಗಳು ದೊರೆಯುವುದಿಲ್ಲ. ಸಾರ್ವಜನಿಕರು ಮೊದಲೇ ಎಚ್ಚೆತ್ತುಕೊಳ್ಳಬೇಕು.   ಸಾಮಾನ್ಯವಾಗಿ ಮೆಡಿಕಲ್ ಸ್ಟೋರ್‍ನವರು ಪ್ರತಿಭಟನೆ ನಡೆಸುತ್ತಿರಲಿಲ್ಲ. ಯಾವುದೇ ಸಂದರ್ಭ ಬಂದರೂ, ಎಂತಹ ಪ್ರತಿಭಟನೆಗಳು ನಡೆದರೂ ಮೆಡಿಕಲ್ ಸ್ಟೋರ್‍ಗಳು ತೆರೆದಿರುತ್ತಿದ್ದವು. ಆದರೆ ಇವರೇ ಪ್ರತಿಭಟನೆಗೆ ಮುಂದಾಗಿದ್ದಾರೆ. ಇದರಿಂದ ಔಷಧಿ ಖರೀದಿ ಅನಿವಾರ್ಯತೆ ಇರುವವರು ಇಂದೇ ಕೊಳ್ಳುವುದು ಉತ್ತಮ.ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ನಾಳೆ ಇಡೀ ದಿನ ಹೊಟೇಲ್‍ಗಳು, ರೆಸ್ಟೋರೆಂಟ್‍ಗಳು ಬಂದ್ ಆಗಲಿವೆ. ಊಟ, ತಿಂಡಿಗೆ ಹೊಟೇಲ್‍ಗಳನ್ನು ಅವಲಂಬಿಸಿರುವ ಬಹುತೇಕ ಮಂದಿಗೆ ಇದರಿಂದ ತೊಂದರೆಯಾಗುವುದು ಸಹಜ. ಇವರೆಲ್ಲ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಹೊಟೇಲ್‍ಗಳಷ್ಟೇ ಅಲ್ಲ, ಬೇಕರಿಗಳು ಸಹ ತೆರೆದಿರುವುದಿಲ್ಲ.   ಬೆಳಗ್ಗೆ 5 ರಿಂದ ರಾತ್ರಿ 11ರವರೆಗೆ ಹೊಟೇಲ್ ಹಾಗೂ ಮೆಡಿಕಲ್ ಸ್ಟೋರ್‍ಗಳು ಇಲ್ಲದಿರುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವುದು ಉತ್ತಮ.

ಜಿಎಸ್‍ಟಿಯಲ್ಲಿ ಹೊಟೇಲ್ ಉದ್ಯಮದ ಮೇಲೆ ಅಧಿಕ ತೆರಿಗೆ ವಿಧಿಸಲು ಮುಂದಾಗಿರುವುದನ್ನು ವಿರೋಧಿಸಿ ಹೊಟೇಲ್ ಮಾಲೀಕರ ಸಂಘಟನೆಗಳು ನಾಳೆ ಪ್ರತಿಭಟನೆ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.  ಅದೇ ರೀತಿ ವೈದ್ಯರ ಪ್ರಿಸ್‍ಕ್ರಿಪ್ಷನ್ ಇಲ್ಲದಿದ್ದರೂ ಆನ್‍ಲೈನ್ ಮೂಲಕ ಔಷಧಿ ಖರೀದಿಸಲು ಅನುಮತಿ ನೀಡಿರುವ ಸರ್ಕಾರದ ಕ್ರಮ ಖಂಡಿಸಿ ಮೆಡಿಕಲ್ ಸ್ಟೋರ್‍ನವರು ಬಂದ್ ಆಚರಿಸುತ್ತಿದ್ದಾರೆ.  ಆನ್‍ಲೈನ್ ಮೂಲಕ ಔಷಧಿ ಖರೀದಿಗೆ ಮುಂದಾದರೆ ಮೆಡಿಕಲ್ ಸ್ಟೋರ್‍ನವರಿಗೆ ಭಾರೀ ಹೊಡೆತ ಬೀಳುತ್ತದೆ. ಇದಲ್ಲದೆ, ವೈದ್ಯರ ಸಲಹೆ ಇಲ್ಲದೆ ಔಷಧಿ ಖರೀದಿಯಿಂದ ಅವಘಡಗಳಿಗೆ ಕಾರಣವಾಗುತ್ತದೆ. ಈ ಎಲ್ಲ ಹಿನ್ನೆಲೆಯಲ್ಲಿ ಮೆಡಿಕಲ್ ಸ್ಟೋರ್‍ನವರು ಕೂಡ ಪ್ರತಿಭಟನೆಗೆ ಮುಂದಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin