ಸಿಡಿಲು ಬಡಿದು ಮಾವಿನಕೆರೆ ರಂಗನಾಥಸ್ವಾಮಿ ದೇಗುಲದ ರಾಜಗೋಪುರ ಜಖಂ

ಈ ಸುದ್ದಿಯನ್ನು ಶೇರ್ ಮಾಡಿ

Ranganath-Temple--1

ಹಾಸನ,ಮೇ 29-ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ಬೆಟ್ಟದ ಮೇಲಿರುವ ಪ್ರಸಿದ್ಧ ಶ್ರೀ ರಂಗನಾಥಸ್ವಾಮಿ ದೇವಾಲಯದ ಗೋಪುರಕ್ಕೆ ಸಿಡಿಲು ಬಡಿದು ರಾಜಗೋಪುರ ಮೇಲಿರುವ ವಿಗ್ರಹಗಳು ಜಖಂ ಆಗಿವೆ. ತಾಲ್ಲೂಕಿನಲ್ಲಿ ಎರಡು ದಿನಗಳಿಂದ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗುತ್ತಿದ್ದು , ನಿನ್ನೆ ರಾತ್ರಿ ದೇವಸ್ಥಾನದ ಗೋಪುರಕ್ಕೆ ಸಿಡಿಲು ಬಡಿದಿದ್ದು ಗೋಪುರದ ಸಿಮೆಂಟ್ ಕಿತ್ತು ಹೋಗಿದೆ ಮತ್ತು ಕೆಲ ಸಿಮೆಂಟ್ ವಿಗ್ರಹಗಳಿಗೆ ಹಾನಿಯಾಗಿದೆ.
ರಂಗನಾಥಸ್ವಾಮಿ ದೇವಸ್ಥಾನದ ರಾಜಗೋಪುರಕ್ಕೆ ಧಕ್ಕೆ ಉಂಟಾಗಿರುವುದು ಶುಭ ಸೂಚನೆಯಲ್ಲ ಎಂದು ಗ್ರಾಮಸ್ಥರು ಆತಂಕಗೊಂಡಿದ್ದಾರೆ.


ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕಂದಾಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಶೀಘ್ರವೇ ರಾಜಗೋಪುರವನ್ನು ದುರಸ್ತಿಗೊಳಿಸಲಾಗುವುದು ಎಂದು ತಹಸೀಲ್ದಾರ್ ತಿಳಿಸಿದ್ದಾರೆ.   ಇತ್ತೀಚೆಗಷ್ಟೇ ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಗೋಪುರಕ್ಕೂ ಕೂಡ ಸಿಡಿಲು ಬಡಿದು ಜಖಂ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin