250 ವರ್ಷಗಳ ನಂತರ ಯತಿಗಳ ಮುಖಾಮುಖಿ, ಭಕ್ತರಿಗೆ ಪುಳಕ

ಈ ಸುದ್ದಿಯನ್ನು ಶೇರ್ ಮಾಡಿ

Udupi--01

ಉಡುಪಿ, ಮೇ 29- ಅದೊಂದು ಸಂಭ್ರಮದ ಸನ್ನಿವೇಶ. ಶ್ರೀ ಕೃಷ್ಣ ಮಠದಲ್ಲಿ ಭಕ್ತರಿಗೆ ಪುಳಕ. 250 ವರ್ಷಗಳ ಕಾಲ. ಇದ್ದ ಕತ್ತಲೆಯ ಛಾಯೆ ಹರಿದು ಹೋದ ದಿನ..! ಇದು ಅಚ್ಚರಿಯಲ್ಲಿ ಅಚ್ಚರಿ. ಎಲ್ಲರಿಗೂ ತಿಳಿದಂತೆ ಉಡುಪಿಯ ಸೋದೆ ಮಠ. ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಮಠದ ಯತಿಗಳು 250 ವರ್ಷಗಳಿಂದ ಮುಖಾಮುಖಿಯಾಗಿರಲಿಲ್ಲ. ಇಂದು ಅದಕ್ಕೆ ಅಂತ್ಯ ಹಾಡಿ ಸೋದೆ ಮಠದ ಶ್ರೀ ವಿಶ್ವ ವಲ್ಲಭ ತೀರ್ಥರು, ಕುಕ್ಕೆ ಸುಬ್ರಹ್ಮಣ್ಯ ಪೀಠಾಧಿಪತಿ ಶ್ರೀ ವಿದ್ಯಾ ಪ್ರಸನ್ನ ತೀರ್ಥರು, ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದರು.



ಉಡುಪಿಯ ಅಷ್ಟ ಮಠಗಳಲ್ಲೊಂದಾದ ಸೋದೆ ವಾದಿರಾಜ ಮಠವನ್ನು ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದ್ದರು. ಶ್ರೀ ಪೇಜಾವರ ವಿಶ್ವೇಶ ತೀರ್ಥರು ಸೇರಿದಂತೆ ಎಲ್ಲಾ ಸ್ವಾಮೀಜಿಗಳು ಮತ್ತು ಭಕ್ತ ಸಮೂಹ ಈ ಅದ್ಭುತ ಕ್ಷಣಕ್ಕೆ ಸಾಕ್ಷಿಯಾದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin