ಆಸ್ಪತ್ರೆ ಎದುರೇ ದ್ವಿಚಕ್ರವಾಹನಕ್ಕೆ ಕ್ರೂಸರ್ ಡಿಕ್ಕಿ: ಸ್ನೇಹಿತರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Accident--001

ಚಿಕ್ಕಮಗಳೂರು, ಮೇ 30– ಸ್ನೇಹಿತನನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾಗ ಆಸ್ಪತ್ರೆ ಮುಂದೆಯೇ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ರಾಮಪ್ಪನಾಯಕ್ (65) ಮತ್ತು ಸ್ನೇಹಿತ ವೆಂಕಟೇಶ್(55) ಮೃತಪಟ್ಟ ದುರ್ದೈವಿಗಳು. ಇವರಿಬ್ಬರು ನಿನ್ನೆ ಬೆಳಗ್ಗೆ ಪಟ್ಟಣದ ಲಯನ್ಸ್ ಭವನದಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಂ ಡು ಮಧ್ಯಾಹ್ನ ಟಿವಿಎಸ್‍ನಲ್ಲಿ ಹಿದುರುಗುತ್ತಿದ್ದರು. ವೆಂಕಟೇಶ್‍ನನ್ನು ರಕ್ತ ಪರೀಕ್ಷೆಗೆಂದು ರಾಮಪ್ಪನಾಯಕ್ ತಮ್ಮ ಟಿವಿಎಸ್ ದ್ವಿಚಕ್ರ ವಾಹನದಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆತರುತ್ತಿದ್ದಾಗ ಮುಖ್ಯರಸ್ತೆಯಿಂದ ಆಸ್ಪತ್ರೆಗೆ ತಿರವು ಪಡೆಯುತ್ತಿದ್ದಂತೆ ಎದುರಿನಿಂದ ಅತಿ ವೇಗವಾಗಿ ಕ್ರೂಸರ್ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಇವರಿಬ್ಬರು ಐದು ಮೀಟರ್ ದೂರದಲ್ಲಿ ಹಾರಿಬಿದ್ದಿದ್ದಾರೆ.ತಕ್ಷಣ ಸಾರ್ವಜನಿಕರು ಇವರಿಬ್ಬರನ್ನು ಆಸ್ಪತ್ರೆಯೊಳಗೆ ಕರೆದೊಯ್ಯುತ್ತಿದ್ದಂತೆ ವೆಂಕಟೇಶ್ ಕೊನೆಯುಸಿರೆಳೆದಿದ್ದಾರೆ. ಎದೆಗೆ ಗಂಭೀರ ಪೆಟ್ಟಾಗಿದ್ದ ರಾಮಪ್ಪನಾಯಕ್ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್‍ಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ರಾತ್ರಿ 11 ಗಂಟೆಯಲ್ಲಿ ಮೃತಪಟ್ಟಿದ್ದಾರೆ.  ಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin