ಗೋಹತ್ಯೆ ನಿಷೇಧ ಅಧಿಸೂಚನೆಗೆ ತಾತ್ಕಾಲಿಕ ತಡೆಯಾಜ್ಞೆ

ಈ ಸುದ್ದಿಯನ್ನು ಶೇರ್ ಮಾಡಿ
MADRAS
ಮಧುರೈ,ಮೇ 30 : ಕಸಾಯಿಖಾನೆಗಳಿಗೆ ಜಾನುವಾರುಗಳ ಮಾರಾಟ ಮತ್ತು ಹತ್ಯೆಗಾಗಿ ಗೋವುಗಳ ವ್ಯಾಪಾರದ ಮೇಲೆ ಕೇಂದ್ರ ಸರ್ಕಾರದ ನಿಷೇಧ ಆದೇಶಕ್ಕೆ ಮದ್ರಾಸ್ ಹೈಕೋರ್ಟ್‍ನ ಮಧುರೈ ಪೀಠ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಸೆಲ್ವ ಗೋಮತಿ ಮತ್ತು ಅಶಿಕ್‍ಬಾಬಾ ಎಂಬವರು ಈ ಕುರಿತು ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಮುರುಳಿಧರನ್ ಮತ್ತು ಕಾರ್ತಿಕೇಯನ್,ಕೇಂದ್ರ ಸರ್ಕಾರದ ಅಧೀಸೂಚನೆಗೆ 4 ವಾರಗಳ ತಡೆಯಾಜ್ಞೆ ನೀಡಿದರು.ಈ ಸಂಬಂಧ 4 ವಾರಗಳ ಒಳಗೆ ಪ್ರತ್ಯುತ್ತರ ನೀಡುವಂತೆ ಕೇಂದ್ರ-ರಾಜ್ಯ ಸರ್ಕಾರಗಳಿಗೆ ಪೀಠ ಅದೇಶಿಸಿದೆ.  ಸಂವಿಧಾನದಲ್ಲಿ ನೀಡಲಾದ ಆಹಾರದ ಹಕ್ಕನ್ನು ಕೇಂದ್ರ ಸರ್ಕಾರ ಕಿತ್ತುಕೊಂಡಿದೆ. ಈ ವಿಷಯದಲ್ಲಿ ಯಾರೂ ಮಧ್ಯಪ್ರವೇಶಿಸಬಾರದು ಎಂದು ಮನವಿಯಲ್ಲಿ ಉಲ್ಲೆಖಿಸಿದ್ದ ಅರ್ಜಿದಾರರು ಅಧಿಸೂಚನೆಗೆ ತಡೆಯಾಜ್ಞೆ ನೀಡುವಂತೆ ಕೋರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin