ನೀವು ತಂಬಾಕು ಪ್ರಿಯರಾ..? ಇದನ್ನೊಮ್ಮೆ ಮರೆಯದೆ ಓದಿ

ಈ ಸುದ್ದಿಯನ್ನು ಶೇರ್ ಮಾಡಿ

smoking

ನನ್ನ ಮಿತ್ರರು ಧೂಮಪಾನ ಮಾಡುತ್ತಿರುವಾಗ ನಾನು ಸುಮ್ಮನಿರಲು ಸಾಧ್ಯವಿಲ್ಲ. ಅದನ್ನು ತಡೆಯಲು ಪ್ರಯತ್ನಿಸುತ್ತೇನೆ.  ತಂಬಾಕು ಅತ್ಯಂತ ಚಟದಾಯಕ ವಸ್ತುವಾಗಿದೆ ಮತ್ತು 3 ಮಂದಿಯಲ್ಲಿ 1(32%) ವ್ಯಕ್ತಿ ಯಾವುದೇ ಬಗೆಯಲ್ಲಿ ತಂಬಾಕು ಬಳಸಿದರೆ ಅದರ ದಾಸನಾಗುತ್ತಾನೆ. ನಮ್ಮ ದೇಶದಲ್ಲಿ ಧೂಮಪಾನ ಮಾಡುವ 100ರಲ್ಲಿ 70 ಮಂದಿ ಧೂಮಪಾನ ತ್ಯಜಿಸುವ ಬಯಕೆ ಹೊಂದಿರುತ್ತಾರೆ, ಅವರಲ್ಲಿ 20 ಮಂದಿ ಪ್ರಯತ್ನಿಸುತ್ತಾರೆ, ಆದರೆ 2 ಮಂದಿ ಮಾತ್ರ ಧೂಮಪಾನದಿಂದ ಹೊರಬರುವಲ್ಲಿ ಯಶಸ್ವಿಯಾಗುತ್ತಾರೆ. ಆದ್ದರಿಂದ ಮೊದಲಿಗೆ ಬೇಡ ಎನ್ನುವ ಮೂಲಕ ನಿಮ್ಮ ಮಿತ್ರರನ್ನೂ ಧೂಮಪಾನದಿಂದ ಆಚೆಬರಲು ಉತ್ತೇಜಿಸಿರಿ.
ಧೂಮಪಾನ ಶ್ವಾಸಕೋಶದ ಕ್ಯಾನ್ಸರ್ ಉಂಟು ಮಾಡಬಹುದು. ಧೂಮರಹಿತ ತಂಬಾಕು ಹಾನಿಕಾರಕವಲ್ಲ.  ಧೂಮಪಾನ (ಸಿಗರೇಟ್ ಮತ್ತು ಬೀಡಿ) ಮತ್ತು ಧೂಮರಹಿತ ತಂಬಾಕು ಸೇವನೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ತಂಬಾಕು ಜಗಿಯುವುದು ಬಾಯಿ ಕ್ಯಾನ್ಸರ್‍ಗೆ ಮುಖ್ಯವಾದ ಕಾರಣವಾಗಿದೆ.  ಹಲವು ಖ್ಯಾತನಾಮರು ಧೂಮಪಾನ ಮಾಡಿಯೂ ಆರೋಗ್ಯವಾಗಿರುತ್ತಾರೆ. ನಾನೇಕೆ ಹಾಗಿರಲು ಸಾಧ್ಯವಿಲ್ಲ? ನನ್ನ ರೋಲ್ ಮಾಡೆಲ್‍ಗಳನ್ನು ಅನುಸರಿಸುವುದು ಒಳ್ಳೆಯದು.  ಯಾವುದೇ ಬಗೆಯ ಧೂಮಪಾನ ವ್ಯಕ್ತಿಯನ್ನು ಆತನ ವಯಸ್ಸಿಗಿಂತ ಹೆಚ್ಚು ವಯಸ್ಸಾದಂತೆ ಕಾಣುವಂತೆ ಮಾಡುತ್ತದೆ. ಯಾವುದೇ ರೂಪದಲ್ಲಿ ತಂಬಾಕು ಬಳಕೆಯಿಂದ ಅಧಿಕ ರಕ್ತದೊತ್ತಡ, ಹೃದಯಾಘಾತಗಳು, ಪಾಶ್ರ್ವವಾಯು, ದುರ್ಬಲ ಮೂಳೆಗಳು, ಮಧುಮೇಹ, ಷಂಡತ್ವ, ಗರ್ಭಪಾತ ಮತ್ತು ಜನ್ಮತಃ ದೋಷಗಳನ್ನು ಉಂಟು ಮಾಡುತ್ತದೆ.

ರೋಗ ನಿರೋಧಕ ಶಕ್ತಿ ದುರ್ಬಲವಾಗುವುದರಿಂದ ಪದೇ ಪದೇ ಸೋಂಕುಗಳಿಗೂ ಕಾರಣವಾಗುತ್ತದೆ. ಆದ್ದರಿಂದ ಧೂಮಪಾನದಲ್ಲಿ ಖ್ಯಾತನಾಮರನ್ನು ಅನುಸರಿಸುವುದು ಒಳ್ಳೆಯದಲ್ಲ.  ನಾನು ದಿನಕ್ಕೆ 1-4 ಸಿಗರೇಟ್ ಮಾತ್ರ ಸೇದುತ್ತೇನೆ, ಕೆಲವರು ದಿನಕ್ಕೆ ಒಂದು ಪ್ಯಾಕ್ ಸೇದುತ್ತಾರೆ. ಆದ್ದರಿಂದ ಅಂತಹ ಗಂಭೀರ ಆರೋಗ್ಯದ ಸಮಸ್ಯೆಗಳು ಉಂಟಾಗದೇ ಇರಬಹುದು.   ತಂಬಾಕು ವ್ಯಕ್ತಿಯಿಂದ ವ್ಯಕ್ತಿಗೆ ದೇಹದ ಪ್ರತಿಕ್ರಿಯೆ ಭಿನ್ನವಾಗಬಹುದು, ಮತ್ತು ಅದು ಕೆಲ ವ್ಯಕ್ತಿಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದಾಗಲೂ ಹಾನಿಯುಂಟು ಮಾಡಬಹುದು.   ನಾನು 5 ವರ್ಷಗಳ ಹಿಂದೆ ಧೂಮಪಾನ ತ್ಯಜಿಸಿದ್ದೇನೆ. ಈಗ ನನಗೆ ಉಂಟಾಗುತ್ತಿರುವ ಕೆಮ್ಮು ಮತ್ತು ಉಸಿರಾಟದ ತೊಂದರೆ ಅದರಿಂದ ಅಲ್ಲದೇ ಇರಬಹುದು. ಆದ್ದರಿಂದ ನಾನು ವೈದ್ಯರಿಗೆ ಧೂಮಪಾನ ಮಾಡುತ್ತಿದ್ದೆ ಎಂದು ಹೇಳುವ ಅಗತ್ಯವಿಲ್ಲ ಎಂದು ಭಾವಿಸಬೇಡಿ.

ಧೂಮಪಾನದ ಕೆಲ ಅಡ್ಡ ಪರಿಣಾಮಗಳಾದ ಶ್ವಾಸಕೋಶಗಳ ಹಾನಿಯನ್ನು ಸರಿಪಡಿಸಲಾಗದು ಮತ್ತು ತಡವಾಗಿ ಬಹಿರಂಗ ಗೊಳ್ಳಬಹುದು. ತಂಬಾಕು ಬಳಕೆಯ ಕುರಿತು ನಿಮ್ಮ ವೈದ್ಯರಿಗೆ ಹೇಳುವುದರಿಂದ ನಿಮ್ಮ ವೈದ್ಯರು ಸೂಕ್ತವಾದ ಪರೀಕ್ಷೆ ನಡೆಸಿ ನಿಮ್ಮ ಪರಿಸ್ಥಿತಿಗೆ ತಕ್ಕಂತೆ ಚಿಕಿತ್ಸೆ ನೀಡಬಹುದು. ನಾನು 10 ವರ್ಷಗಳಿಂದ ಧೂಮಪಾನ ಮಾಡುತ್ತಿದ್ದೇನೆ. ಕೆಲ ಹಾನಿಗಳನ್ನು ಸರಿಪಡಿಸಲಾಗದೇ ಇದ್ದರೆ ನಾನೇಕೆ ಧೂಮಪಾನ/ತಂಬಾಕು ಸೇವನೆ ತ್ಯಜಿಸಬೇಕು? ಸಿಗರೇಟ್ 200 ಹಾನಿಕಾರಕ ರಾಸಾಯನಿಕಗಳನ್ನು ಹೊಂದಿದ್ದು ಅವು ನಮ್ಮ ಶ್ವಾಸಕೋಶಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಸತತವಾಗಿ ಧೂಮಪಾನ ಹೃದಯಾಘಾತಕ್ಕೆ ಕಾರಣವಾಗುತ್ತದೆ.


ನಮ್ಮ ದೇಹದ ಪ್ರತಿಯೊಂದು ಅಂಗವೂ ತಂಬಾಕು ಬಳಕೆಯಿಂದ ಹಾನಿಗೊಳ್ಳುತ್ತದೆ. ಆದರೆ ತಂಬಾಕು ಬಳಕೆ ತ್ಯಜಿಸುವುದರಿಂದ ಒಟ್ಟಾರೆ ಆರೋಗ್ಯ ಸುಧಾರಿಸುವುದಲ್ಲದೆ ದೀರ್ಘಾವಧಿಯಲ್ಲಿ ಗಂಭೀರ ಆರೋಗ್ಯದ ರಿಸ್ಕ್‍ಗಳನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿನ ಹಾನಿಕಾರಕ ರಾಸಾಯನಿಕಗಳ ಪ್ರಮಾಣ ಧೂಮಪಾನ ತ್ಯಜಿಸಿದ 8-10 ಗಂಟೆಗಳಲ್ಲೇ ಕಡಿಮೆಯಾಗುತ್ತವೆ. ತಂಬಾಕು ತ್ಯಜಿಸಿದ 5-15 ವರ್ಷಗಳ ನಂತರ ಹೃದಯಾಘಾತ, ಪಾಶ್ರ್ವವಾಯು ಅಥವಾ ಶ್ವಾಸಕೋಶದ ಕ್ಯಾನ್ಸರ್‍ನ ಸಂಭವನೀಯತೆ ಧೂಮಪಾನಿಗಳಲ್ಲದವರ ಮಟ್ಟಕ್ಕೆ ತಲುಪುತ್ತದೆ. ಭಾಗಶಃ ಹಾನಿಯುಂಟಾಗಿದ್ದರೂ ತಂಬಾಕು ತ್ಯಜಿಸುವುದರಿಂದ ತಂಬಾಕು ಬಳಕೆಗಿಂತ ಹಲವು ಪಟ್ಟು ಹೆಚ್ಚು ಅನುಕೂಲವಾಗುತ್ತದೆ.

ನನ್ನ ಧೂಮಪಾನದಿಂದ ನನ್ನ ಕುಟುಂಬದ ಆರೋಗ್ಯಕ್ಕೆ ಯಾವುದೇ ಪರಿಣಾಮವಿಲ್ಲ:

ನಿಮ್ಮ ಧೂಮಪಾನದಿಂದ ನಿಮ್ಮ ಸುತ್ತಲಿನವರೂ ದ್ವಿತೀಯ ಹಂತದ ಹಾನಿಗೊಳಗಾಗುವ ಕುರಿತು ಈಗಾಗಲೇ ಎಲ್ಲರಿಗೂ ತಿಳಿದಿದೆ. ಆದರೆ ಬಟ್ಟೆಯ ಮೇಲೆ, ಅಪ್‍ಹೋಲ್‍ಸ್ಟ್ರಿಯ ಮೇಲೆ ಸಂಗ್ರಹವಾದ ನಿಕೋಟಿನ್ ತೃತೀಯ ಹಂತದಲ್ಲಿ ಹಾನಿಯುಂಟು ಮಾಡುತ್ತದೆ. ನೀವು ಹೊರಗಡೆ ಧೂಮಪಾನ ಮಾಡಿದರೂ ನಿಕೋಟಿನ್ ಅನ್ನು ನಿಮ್ಮ ಬಟ್ಟೆ ಹಾಗೂ ಕೂದಲಿಗೆ ಅಂಟಿಸಿಕೊಂಡು ಮನೆಗೆ ತರುತ್ತೀರಿ. ಆದ್ದರಿಂದ ತಂಬಾಕು ಯಾರಿಗೂ ಒಳ್ಳೆಯದಲ್ಲ. ಬೀಡಿ ಸುತ್ತುವವರಿಂದ ನಿಕೋಟಿನ್ ಮೆತ್ತಿಕೊಂಡ ಸೋಫಾ ಮತ್ತು ಅಪ್‍ಹೋಲ್‍ಸ್ಟ್ರಿಯ ಕೋಣೆಯಲ್ಲಿನ ಗಾಳಿಯಿಂದಲೂ ನಿಕೋಟಿನ್‍ನ ಅಡ್ಡ ಪರಿಣಾಮಗಳು ಉಂಟಾಗುತ್ತವೆ.  ನಿಮ್ಮ ಮಗುವಿನ ಅಸ್ತಮಾ ಮತ್ತು ಇತರೆ ಸಮಸ್ಯೆಗಳು ದ್ವಿತೀಯ ಮತ್ತು ತೃತೀಯ ಹಂತದ ತಂಬಾಕು ಸೇವನೆಯಿಂದ ಉಂಟಾಗುತ್ತದೆ.

ತಂಬಾಕು ಚಟದಿಂದ ಮುಕ್ತನಾಗಲು ನನಗೆ ಎಷ್ಟು ಸಮಯ ಬೇಕಾಗುತ್ತದೆ?

ನಾಲ್ಕು ವಾರಗಳಲ್ಲಿ ತಂಬಾಕು ತ್ಯಜಿಸಿದ ಲಕ್ಷಣಗಳು ಕೊನೆಗೊಳ್ಳುತ್ತವೆ. ಈ ಲಕ್ಷಣಗಳನ್ನು ಬಿಹೇವಿಯರ್ ಥೆರಪಿ, ಇನ್‍ಹೇಲರ್‍ಗಳು, ನಿಕೋಟಿನ್ ರಿಪ್ಲೇಸ್‍ಮೆಂಟ್‍ನಿಂದ ಬಯಕೆ ನಿಯಂತ್ರಣದವರೆಗೆ, ಆತಂಕ ಮತ್ತು ಖಿನ್ನತೆ ನಿವಾರಣೆಗೆ ಆ್ಯಂಟಿ ಡಿಪ್ರೆಸೆಂಟ್‍ಗಳ ಮೂಲಕ ಸಮರ್ಥವಾಗಿ ನಿಭಾಯಿಸ ಬಹುದು. ಈ ಚಟದಿಂದ ದೂರವಾಗಲು ಹಲವು ವಾರಗಳು-ತಿಂಗಳು ಅಗತ್ಯವಾಗ ಬಹುದು ಮತ್ತು ನಿಯಮಿತವಾಗಿ ವೃತ್ತಿಪರರ ಮಾರ್ಗದರ್ಶನ ಅಗತ್ಯವಾಗುತ್ತದೆ.
ಗುಂಪು ಮಧ್ಯಸ್ಥಿಕೆಗಳು ಮತ್ತು ಸರಿಯಾದ ಡ್ರಗ್ ಥೆರಪಿಯಿಂದ ಧೂಮಪಾನ ತ್ಯಜಿಸಲು ನೆರವಾಗುತ್ತದೆ. ವೈದ್ಯರು ರೋಗಿಗಳಲ್ಲಿ ತಂಬಾಕು ಚಟವನ್ನು ಗುರುತಿಸಿ ಅವರಿಗೆ ಅದನ್ನು ತ್ಯಜಿಸುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಯಾವುದೇ ಬಗೆಯ ಆರೋಗ್ಯದ ಸಮಸ್ಯೆಗಳಿಗೆ ಭೇಟಿ ನೀಡಿದಾಗ ನಿಮ್ಮ ತಂಬಾಕು ಬಳಕೆಯ(ಹಿಂದ/ಪ್ರಸ್ತುತ) ಕುರಿತು ವೈದ್ಯರಿಗೆ ಮಾಹಿತಿ ನೀಡುವುದು ಮತ್ತು ಅದರ ನಿರ್ವಹಣೆಯ ಸಲಹೆ ಪಡೆಯುವುದು ಸೂಕ್ತ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin