ಬಾಂಗ್ಲಾದೇಶಕ್ಕೆ ಅಪ್ಪಳಿಸಿದ ಮೋರಾ ಚಂಡಮಾರುತ, ಲಕ್ಷಾಂತರ ಜನರ ಸ್ಥಳಾಂತರ

ಈ ಸುದ್ದಿಯನ್ನು ಶೇರ್ ಮಾಡಿ

More--01

ಢಾಕಾ, ಮೇ 30-ನಿರೀಕ್ಷೆಯಂತೆ ಮೋರಾ ಚಂಡಮಾರುತ ಇಂದು ಬಾಂಗ್ಲಾದೇಶದ ಕರಾವಳಿ ಪ್ರದೇಶಗಳ ಮೇಲೆ ಅಪ್ಪಳಿಸಿದ್ದು, ಪ್ರಚಂಡ ಮಾರುತದ ರೌದ್ರಾವತಾರಕ್ಕೆ 10 ಜಿಲ್ಲೆಗಳಲ್ಲಿನ ಅನೇಕ ಮನೆಗಳು ನಾಶವಾಗಿದ್ದು, ಲಕ್ಷಾಂತರ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಗಂಟೆಗೆ 117 ಕಿ.ಮೀ. ವೇಗದಲ್ಲಿ ಬೀಸುತ್ತಿರುವ ಚಂಡಮಾರುತದಿಂದ ಸಂಭವಿಸಬಹುದಾದ ಅನಾಹುತಗಳನ್ನು ತಪ್ಪಿಸಲು ಕರಾವಳಿ ಪ್ರದೇಶಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.ಮೋರಾ ತೀವ್ರ ಚಂಡಮಾರುತವು ಉತ್ತರ ಕೊಲ್ಲಿಯತ್ತ ಸಾಗಲು ಉತ್ತರ ದಿಕ್ಕಿನತ್ತ ವೇಗವಾಗಿ ಚಲಿಸುತ್ತಿದ್ದು, ಬೆಳಗ್ಗೆ 6 ಗಂಟೆಯಲ್ಲಿ ಚಿಟ್ಟಗಾಂಗ್ ಮತ್ತು ಕಾಕ್ಸ್ ಬಜಾರ್ ಮೂಲಕ ಹಾದು ಹೋಯಿತು. ಸಮುದ್ರದಲ್ಲಿ ಸಾಮಾನ್ಯಕ್ಕಿಂತ 4-5 ಅಡಿಗಳಷ್ಟು ಎತ್ತರದ ಅಲೆಗಳು ಅಪ್ಪಳಿಸುತ್ತಿವೆ ಎಂದು ಬಾಂಗ್ಲಾದೇಶ ಹವಾಮಾನ ಇಲಾಖೆಯ ವಿಶೇಷ ಸುದ್ದಿ ಪ್ರಸಾರದಲ್ಲಿ ತಿಳಿಸಿದೆ.

ಚಂಡಮಾರುತದ ಪ್ರಭಾವದಿಂದ ಕರಾವಳಿ ತೀರ ಪ್ರದೇಶಗಳಲ್ಲಿ ಗುಡುಗು ಸಿಡಿಲುಗಳೊಂದಿಗೆ ಭಾರೀ ಮಳೆಯಾಗುತ್ತಿದೆ. ರಭಸದ ಗಾಳಿ-ಮಳೆಯೊಂದಿಗೆ 10 ಜಿಲ್ಲೆಗಳು ತೀವ್ರ ಹೊಡೆತಕ್ಕೆ ಸಿಲುಕಿದ್ದು, ಅನೇಕ ಮನೆಗಳು ನಾಶವಾಗಿದ್ದು, 3 ಲಕ್ಷಕ್ಕೂ ಹೆಚ್ಚು ಮಂದಿ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
ಕರಾವಳಿ ಜಿಲ್ಲೆಗಳಾದ ಕಾಕ್ಸ್ ಬಜಾರ್, ಚಿಟ್ಟಗಾಂಗ್, ನೋವಾಖಾಲಿ, ಲಕ್ಷ್ಮೀಪುರ್, ಫೆನಿ, ಚಂದಾಪುರ್, ಬರ್ಗುನ, ಪಟುವಾಖಾಲಿ, ಭೋಲಾ, ಬರಿಸಾಲ್ ಮತ್ತು ಫಿರೋಪ್‍ಪುರ್ ಜಿಲ್ಲೆಗಳ 2.5 ದಶಲಕ್ಷ ಜನರು ಚಂಡಮಾರುತದ ಪ್ರಕೋಪದಿಂದ ತೊಂದರೆಗೆ ಒಳಗಾಗಿದ್ದಾರೆ.   ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಎದ್ದಿರುವುದರಿಂದ ಭಾರತದ ಒಡಿಶಾ ಕರಾವಳಿ ಪ್ರದೇಶಗಳಲ್ಲೂ ಭಾರೀ ಮಳೆಯಾಗುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin