ಬಿಸಿಲ ನಾಡು ಚಿತ್ರದುರ್ಗದಲ್ಲಿ ಎರಡು ಆನೆಗಳು ಪ್ರತ್ಯಕ್ಷ

ಈ ಸುದ್ದಿಯನ್ನು ಶೇರ್ ಮಾಡಿ

ಚಿತ್ರದುರ್ಗ,ಮೇ 30-ಬಿಸಿಲ ನಾಡು ಚಿತ್ರದುರ್ಗದಲ್ಲಿ ಎರಡು ಆನೆಗಳು ಪ್ರತ್ಯಕ್ಷವಾಗಿದ್ದು ರೈತರು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ ಮಾಡಿವೆ.
ಜಿಲ್ಲೆಯ ಹೊಸದುರ್ಗ ತಾಲ್ಲುಕಿನ ವಾಣಿ ವಿಲಾಸ ಜಲಾಶಯದ ಹಿನ್ನೀರಿನಲ್ಲಿ ಆನೆಗಳೆರಡು ಪ್ರತ್ಯಕ್ಷವಾಗಿವೆ.   ಜಲಾಶಯ ಸಮೀಪದ ಇಟ್ಟಿಗೆ ಹಳ್ಳಿಯ ರೈತ ಗೋವಿಂದಪ್ಪ ಅವರ ಹೊಲದಲ್ಲಿ ರಾತ್ರಿಯಿಡೀ ಬೀಡು ಬಿಟ್ಟಿದ್ದ ಆನೆಗಳು ಶೇಂಗಾ ಬೆಳೆ ಹಾನಿ ಮಾಡಿವೆ.  ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯ ರಕ್ಷಕ ರಾಘವೇಂದ್ರ ತಂಡ ಆನೆಗಳನ್ನು ಓಡಿಸಲು ಕಾರ್ಯಾಚರಣೆ ಕೈಗೊಂಡಿದ್ದಾರೆ. ಆನೆಗಳು ವಾಣಿ ವಿಲಾಸ ಸಾಗರಕ್ಕೆ ನುಗ್ಗಿ ನೀರಿನಲ್ಲಿ ಇಳಿದು ಜಲಕ್ರೀಡೆ ಆಡುತ್ತಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin