ಮೆಕ್ಸಿಕೋ ನಗರದಲ್ಲಿ ಪ್ರಾಣಿ ಪಕ್ಷಿಗಳ ರಕ್ಷಣೆಗೆ ವಿನೂತನ ಪ್ರಾರ್ಥನೆ

ಈ ಸುದ್ದಿಯನ್ನು ಶೇರ್ ಮಾಡಿ

maxico

ಮೆಕ್ಸಿಕೋ ನಗರದಲ್ಲಿ ಅಚ್ಚುಮೆಚ್ಚಿನ ಸಾಕು ಪ್ರಾಣಿ ಪಕ್ಷಿಗಳಿಗೆ ಒಂದೆಡೆ ಕಲೆತು ಬೆರೆತ ಸಂಭ್ರಮ. ಪ್ರಾಣಿಗಳ ಆಪ್ತ ರಕ್ಷಕ ಎಂದು ಕರೆಯಲ್ಪಡುವ ಸೇಂಟ್ ಅಂಟೋನಿ ಉತ್ಸವದ ಅಂಗವಾಗಿ ನಡೆದ ಆಶೀರ್ವಾದ ಸಮಾರಂಭದಲ್ಲಿ ಸಣ್ಣ ಮತ್ತು ದೊಡ್ಡ ಪ್ರಾಣಿಗಳು ಸೇರಿದಂತೆ ಸಕಲ ಜೀವಿಗಳು  ಸಮಾಗಮಗೊಂಡಿದ್ದವು. ಇದು ಪ್ರತಿ ವರ್ಷ ಅಲ್ಲಿ ಕಂಡುಬರುವ ಸಾಮಾನ್ಯ ದೃಶ್ಯ.  ತಮ್ಮ ಮುದ್ದಿನ ಸಾಕು ಪ್ರಾಣಿಗಳಿಗೆ ದೇವರ ಆಶೀರ್ವಾದದ ಕೃಪೆ ದೊರಕಿಸಿಕೊಡಲು ಪ್ರಾಣಿಗಳ ಮಾಲೀಕರು ಸ್ಯಾನ್ ಬರ್ನಾಡಿನೋ ಚರ್ಚ್‍ಗೆ ಆಗಮಿಸುತ್ತಾರೆ. ಅಪಾಯ ಮತ್ತು ದುರ್ದೈವ ಘಟನೆಗಳಿಂದ ರಕ್ಷಿಸಲು ಪಾದ್ರಿಗಳಿಂದ ಪ್ರಾಣಿಗಳ ಮೇಲೆ ಪವಿತ್ರ ಜಲವನ್ನು ಪ್ರೇಕ್ಷಣೆ  ಮಾಡಿಸುತ್ತಾರೆ.


ಬಡವರ ಏಳಿಗೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ಹಾಗು ಪ್ರಾಣಿಗಳ ಒಡನಾಟಗಳೊಂದಿಗೆ ಮಾತ್ರ ಮರುಭೂಮಿಯಲ್ಲಿ ಬೈರಾಗಿಯಂತೆ ಬದುಕು ದೂಡಿದ ನಾಲ್ಕನೇ ಶತಮಾನದ ಕ್ರೈಸ್ತ ಮಹಾಪುರುಷ ಸಂತ ಆಂಟೋನಿಯ.  ಸಚಿತ ಆಂಟೋನಿ ಅವರ ವಾರ್ಷಿಕ ಪುಣ್ಯ ಸ್ಮರಣೆ ದಿನದಂದು ನಾವು ಪ್ರಾಣಿಗಳನ್ನು ಇಲ್ಲಿಗೆ ಆಶೀರ್ವಾದಕ್ಕಾಗಿ ಕರೆತರುತ್ತೇವೆ. ಏಕೆಂದರೆ, ನಮ್ಮ ತಾತಂದಿರು ಯಾವಾಗಲು ಈ ಸಂಪ್ರದಾಯವನ್ನು ನಮ್ಮಲ್ಲಿ ತುಂಬಿದ್ದರು ಎಂದು ಪ್ರಾದಿಯ ಅಧಿಕಾರ ಪ್ರದೇಶದ ನಿವಾಸಿ ಮಾಗ್ಡ ನಜೆರಾ ಹೇಳುತ್ತಾರೆ.ಕೆಲವು ಪ್ರಾಣಿಗಳು, ಕೆಲವು ಸಾಕುಪ್ರಾಣಿಗಳು ತುಂಬಾ ಹೊಂದಾಣಿಕೆಯಾಗುತ್ತಿವೆ. ಆ ಕಾರಣಕ್ಕಾಗಿಯೇ ದೇವರಿಂದ ಆಶೀರ್ವಾದ ಪಡೆಯಲು ಇಚ್ಚಿಸುತ್ತಾರೆ. ದಯಾಮಯನಾದ ದೇವನು ಪವಿತ್ರ ಜಲ ಪ್ರೇಕ್ಷಣೆ  ಈ ಮುದ್ದಾದ ಪ್ರಾಣಿಗಳನ್ನು ರಕ್ಷಿಸಲು ಕೃಪೆ ತೋರುವಂತೆ ಮನವಿ ಮಾಡುತ್ತೇವೆ ಎನ್ನುತ್ತಾರೆ ಆಶೀರ್ವಾದ ಕೈಂಕರ್ಯಗಳನ್ನು ನಡೆಸುವ ಫಾದರ್ ಅಡ್ರಿಯಾನ್ ಹ್ಯೂರ್‍ಟಾ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin