ದೆಹಲಿ ಐಐಟಿ ಕ್ಯಾಂಪಸ್‍ನಲ್ಲಿ ಪಿಎಚ್‍ಡಿ ವಿದ್ಯಾರ್ಥಿನಿ ನಿಗೂಢ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Manjula--012

ನವದೆಹಲಿ, ಮೇ 31-ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ದೆಹಲಿ ಕ್ಯಾಂಪಸ್‍ನಲ್ಲಿ 27 ವರ್ಷದ ಪಿಎಚ್‍ಡಿ ವಿದ್ಯಾರ್ಥಿಯೊಬ್ಬ ನಿಗೂಢ ಸಾವಿಗೀಡಾಗಿದ್ದಾರೆ. ಕ್ಯಾಂಪಸ್ ಆವರಣದಲ್ಲಿರುವ ನಳಂದ ಅಪಾರ್ಟ್‍ಮೆಂಟ್ ಕೊಠಡಿಯಲ್ಲಿ ನಿನ್ನೆ ರಾತ್ರಿ 7.40ರಲ್ಲಿ ಫ್ಯಾನ್‍ಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.  ರಿತೇಶ್ ವೀರ್ಹಾ ಎಂಬುವರನ್ನು ವಿವಾಹವಾಗಿದ್ದ ಮಂಜುಳಾ ಜಲಸಂಪನ್ಮೂಲ ಅಧ್ಯಯನಗಳ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದರು.

ಆಕೆಯ ಪತಿ ಮತ್ತು ಕುಟುಂಬ ವರ್ಗದವರು ಭೋಪಾಲ್‍ನಲ್ಲಿದ್ದಾರೆ. ಆಕೆಯ ಕೊಠಡಿಯಲ್ಲಿ ಸೂಸೈಡ್ ನೋಟ್ ಪತ್ತೆಯಾಗಿಲ್ಲ. ಇದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಚಿನ್ಮಯಿ ಬಿಸ್ವಾಲ್ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin