ಪಾರ್ವತಮ್ಮನವರ ಅಂತಿಮ ದರ್ಶನ ಪಡೆದ, ಚಿತ್ರರಂಗ, ಮತ್ತು ರಾಜಕೀಯ ಗಣ್ಯರು (Photos)

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 31- ಕನ್ನಡ ಚಲನಚಿತ್ರರಂಗದ ಹೆಸರಾಂತ ನಿರ್ಮಾಪಕಿ ಡಾ.ಪಾರ್ವತಮ್ಮ ರಾಜ್‍ಕುಮಾರ್ ಅವರ ನಿಧನಕ್ಕೆ ರಾಜ್ಯಪಾಲ ವಿ.ಆರ್.ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೇರಿದಂತೆ ರಾಜ್ಯದ ಗಣ್ಯಾತಿಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ.
ರಾಜ್ಯಪಾಲ ವಿ.ಆರ್.ವಾಲಾ ಅವರು ಪಾರ್ವತಮ್ಮ ಅವರ ನಿಧನದಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ನಿರ್ಮಾಪಕಿಯಾಗಿ ಅವರು ಸಲ್ಲಿಸಿದ ಸೇವೆ ಅನನ್ಯವಾದುದು ಎಂದು ಗುಣಗಾನ ಮಾಡಿದ್ದಾರೆ. [ ಇದನ್ನೂ ಓದಿ :   ರಾಜ್‍ಕುಮಾರ್-ಪಾರ್ವತಮ್ಮ ಮತ್ತು 500 ರೂ. ನೋಟು..! ]

 

Parvatamma--Rajkumar--07

ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಶೋಕ ಸಂದೇಶದಲ್ಲಿ ಮೂಲತಃ ನಮ್ಮ ಮೈಸೂರು ಜಿಲ್ಲೆಯವರಾದ ಪಾರ್ವತಮ್ಮನವರು ಎಂಬತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದರು. ಒಂದೆಡೆ ಕನ್ನಡ ಚಲನಚಿತ್ರರಂಗಕ್ಕೆ ಹಲವು ಕಲಾವಿದರನ್ನು ಹಾಗೂ ತಂತ್ರಜ್ಞರನ್ನು ಪರಿಚಯಿಸಿ, ಅವರಿಗೆ ಬದುಕು ಕಟ್ಟಿಕೊಟ್ಟ ಕೀರ್ತಿಯೂ ಅವರದು. ಮತ್ತೊಂದೆಡೆ ಕನ್ನಡ ಚಿತ್ರರಂಗದ ಮಾರುಕಟ್ಟೆಯ ಮೌಲ್ಯವನ್ನು ವೃದ್ಧಿಸಿದ ಹಾಗೂ ವ್ಯಾಪ್ತಿಯನ್ನು ವಿಸ್ತರಿಸಿದ ಹೆಗ್ಗಳಿಕೆಯೂ ಅವರದು ಎಂದಿದ್ದಾರೆ.  ನಟ ಸಾರ್ವಭೌಮ ಡಾ.ರಾಜ್‍ಕುಮಾರ್ ಅವರ ಯಶಸ್ಸಿನ ಒಂದು ಭಾಗವೇ ಆಗಿದ್ದ ಪಾರ್ವತಮ್ಮ ಅವರು ಪ್ರತಿ ಯಶಸ್ವೀ ಪುರುಷನ ಹಿಂದೆ ಓರ್ವ ಮಹಿಳೆ ಇರುತ್ತಾಳೆ ಎಂಬ ನಾಣ್ಣುಡಿಗೆ ಅತ್ಯುತ್ತಮ ಉದಾಹರಣೆ ಎಂದು ಸಿದ್ದರಾಮಯ್ಯ ಅವರು ಬಣ್ಣಿಸಿದ್ದಾರೆ. [ ಇದನ್ನೂ ಓದಿ : ಅಮ್ಮನಿಲ್ಲದೆ ಅನಾಥವಾದ ಕನ್ನಡ ಚಿತ್ರರಂಗ ]

 

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪಾರ್ವತಮ್ಮನವರ ನಿಧನದಿಂದ ಕನ್ನಡ ಚಿತ್ರರಂಗ ಹಾಗೂ ಸಾಂಸ್ಕøತಿಕ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.   ಬಿ.ಎಸ್.ಯಡಿಯೂರಪ್ಪ ಅವರು ವರನಟ ಡಾ.ರಾಜ್‍ಕುಮಾರ್ ಅವರ ಧರ್ಮಪತ್ನಿ ಪಾರ್ವತಮ್ಮನವರು ಕೇವಲ ಚಿತ್ರರಂಗಕ್ಕೆ ಮಾತ್ರವಲ್ಲ, ನಾಡಿನ ಸಾಂಸ್ಕøತಿಕ ಲೋಕದಲ್ಲಿ ಅಮ್ಮ ಎಂದೇ ಗೌರವಿಸುವಂತಹ ಎತ್ತರದ ಸ್ಥಾನಕ್ಕೆ ಏರಿದ್ದರು. ನಿರ್ಮಾಪಕಿಯಾಗಿ ಕನ್ನಡ ಚಿತ್ರರಂಗದ ಆಧಾರ ಸ್ತಂಭದಂತೆ ಗಟ್ಟಿಯಾಗಿ ನಿಂತು ಸದಭಿರುಚಿ ಚಿತ್ರಗಳನ್ನು ನಿರ್ಮಿಸಿದ್ದರು. ಚಿತ್ರರಂಗದಲ್ಲಿ ಮಾಡಿರುವ ಅವರ ಸಾಧನೆ ಚರಿತ್ರಾರ್ಹವಾಗಿದೆ ಎಂದು ಯಡಿಯೂರಪ್ಪ ಗುಣಗಾನ ಮಾಡಿದ್ದಾರೆ. [ ಇದನ್ನೂ ಓದಿ : ಅಂಧರ ಬಾಳಿಗೆ ಬೆಳಕಾಗಿ ಸಾವಿನಲ್ಲೂ ಸಾರ್ಥಕತೆ ಮೆರೆದ ಪಾರ್ವತಮ್ಮನವರು ]

 

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಕನ್ನಡ ಚಿತ್ರರಂಗದ ಮೇರು ನಟ ಡಾ.ರಾಜ್‍ಕುಮಾರ್ ಅವರ ಧರ್ಮಪತ್ನಿ ಪಾರ್ವತಮ್ಮ ನವರ ನಿಧನದಿಂದ ನಾಡಿಗೆ ತುಂಬಲಾರದ ನಷ್ಟ ಉಂಟಾಗಿದೆ. ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ನೀಡಿರುವ ಸೇವೆ ಶ್ರೇಷ್ಠವಾಗಿದೆ ಎಂದು ಸ್ಮರಿಸಿದ್ದಾರೆ.
ಮಾಜಿ ಸಚಿವ ವಿ.ಸೋಮಣ್ಣ ಅವರು ತಮ್ಮ ಶೋಕ ಸಂದೇಶದಲ್ಲಿ ಪಾರ್ವತಮ್ಮನವರು ಕನ್ನಡ ಚಿತ್ರರಂಗದಲ್ಲಿ ಹಲವು ಪ್ರತಿಭೆಗಳನ್ನು, ತಂತ್ರಜ್ಞರನ್ನು ಬೆಳಕಿಗೆ ತಂದಿದ್ದರು. ಮೈಸೂರಿನಲ್ಲಿ ಶಕ್ತಿಧಾಮ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಹಲವು ಬಡ ಮತ್ತು ಅನಾಥ ಮಹಿಳೆಯರು, ಮಕ್ಕಳಿಗೆ ಆಶ್ರಯ ಕಲ್ಪಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಸ್ಮರಿಸಿದ್ದಾರೆ.

ಸಚಿವರಾದ ಉಮಾಶ್ರೀ, ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಉಪಮುಖ್ಯಮಂತ್ರಿಗಳಾದ ಆರ್.ಅಶೋಕ್, ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವರಾದ ಎಚ್.ಡಿ.ರೇವಣ್ಣ, ಬಿ.ಎನ್.ಬಚ್ಚೇಗೌಡ ಸೇರಿದಂತೆ ಹಲವು ಗಣ್ಯರು ಪಾರ್ವತಮ್ಮನವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.   ಪಾರ್ವತಮ್ಮ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಪಾರ್ವತಮ್ಮನವರ ಅಗಲಿಕೆಯಿಂದ ಉಂಟಾದ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಕರುಣಿಸಲಿ ಎಂದು ಗಣ್ಯರು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.

Parvatamma 1

Parvatamma 2

Parvatamma 3

Parvatamma 4

Parvatamma 5

Parvatamma 6

Parvatamma 7

Parvatamma 8

Parvatamma 9

Parvatamma 10

Parvatamma 11

Parvatamma 12

Parvatamma 13

Parvatamma 14

Parvatamma 15

Parvatamma 16 Parvatamma 17

Parvatamma 18

Parvatamma 19

Parvatamma 20

Parvatamma 21

Parvatamma 22

Parvatamma 23

Parvatamma 24

Parvatamma 25

Parvatamma 26

Parvatamma 27

Parvatamma 28

Parvatamma 29

Parvatamma 30

Parvatamma 31

Facebook Comments

Sri Raghav

Admin