ಯುಪಿಎಸ್‌ಸಿ ಫಲಿತಾಂಶ ಪ್ರಕಟ : ಕರ್ನಾಟಕದ ಕೆ.ಆರ್. ನಂದಿನಿಗೆ ಮೊದಲ ರ‌್ಯಾಂಕ್

ಈ ಸುದ್ದಿಯನ್ನು ಶೇರ್ ಮಾಡಿ

UPSC--01

ನವದೆಹಲಿ. ಮೇ.31: 2016ನೇ ಸಾಲಿನ ಕೇಂದ್ರ ಲೋಕಸೇವ ಆಯೋಗ (ಯುಪಿಎಸ್ಸಿ) ಫಲಿತಾಂಶ ಪ್ರಕಟಗೊಂಡಿದ್ದು , ಕರ್ನಾಟಕದ ಕೆ.ಆರ್. ನಂದಿನಿ ಮೊದಲ ರ‌್ಯಾಂಕ್ ಪಡೆದಿದ್ದಾರೆ. ಅನ್ಮೋಲ್ ಶೇರ್ ಸಿಂಗ್ 2ನೇ ಹಾಗೂ ಗೋಪಾಲ ಕೃಷ್ಣ ರೋನಂಕಿ 3ನೇ ರ‌್ಯಾಂಕ್ ಪಡೆದಿದ್ದಾರೆ. ಸೌಮ್ಯ ಪಾಂಡೆ ನಾಲ್ಕನೆ ಸ್ಥಾನ, ಅಭಿಲಾಶ್ ಮಿಶ್ರಾ ಐದನೇ ಸ್ಥಾನ ಪಡೆದಿದ್ದಾರೆ.


ದೇಶದ ಅತ್ಯುನ್ನತ ನಾಗರಿಕ ಸೇವೆಗಳಾದ ಐಎಎಸ್, ಐಎಫ್ಎಸ್ ಮತ್ತು ಐಪಿಎಸ್ ಸೇರಿದಂತೆ ಒಟ್ಟು 1099 ಹುದ್ದೆಗಳಿಗೆ ಯುಪಿಎಸ್ ಸಿ ಮೂರು ಹಂತಗಳ ಪರೀಕ್ಷೆ ನಡೆಸಿತ್ತು. ಯುಪಿಎಸ್‌ಸಿ  ಐಎಎಸ್, ಐಪಿಎಸ್,ಐಎಫ್’ಎಸ್ ಸೇರಿದಂತೆ ವಿವಿಧ ಸೇವೆಗಳಿಗೆ ಪ್ರತಿ ವರ್ಷ ಪರೀಕ್ಷೆ ನಡೆಸುತ್ತದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin