ವಿಮಾನಯಾನ ಇಲಾಖೆ ಅವ್ಯವಹಾರಗಳ ಕುರಿತು ಸಿಬಿಐನಿಂದ 3 ಎಫ್‍ಐಆರ್ ದಾಖಲು

ಈ ಸುದ್ದಿಯನ್ನು ಶೇರ್ ಮಾಡಿ

CBI--01

ನವದೆಹಲಿ, ಮೇ 31-ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ನಾಗರಿಕ ವಿಮಾನಯಾನ ಇಲಾಖೆ ನಡೆಸಿದೆ ಎನ್ನಲಾದ ಅವ್ಯವಹಾರಗಳ ಕುರಿತು ಕೇಂದ್ರೀಯ ತನಿಖಾ ದಳ (ಸಿಬಿಐ) ಮೂರು ಎಫ್‍ಐಆರ್‍ಗಳನ್ನು ದಾಖಲಿಸಿದೆ.   ಏರ್ ಇಂಡಿಯಾ ಸಂಸ್ಥೆಗೆ 50 ಬೋಯಿಂಗ್ ವಿಮಾನಗಳ ಖರೀದಿ, ವಿಮಾನಗಳ ಗುತ್ತಿಗೆ, ಲಾಭದಾಯಕ ಅಂತಾರಾಷ್ಟ್ರೀಯ ವಿಮಾನಯಾನ ಮಾರ್ಗಗಳನ್ನು ಖಾಸಗಿ ಸಂಸ್ಥೆಗಳಿಗೆ ನೀಡಿಕೆ ಈ ಮೂರು ಪ್ರಕರಣಗಳ ಸಂಬಂಧ ಸಿಬಿಐ ಅಧಿಕಾರಿಗಳು ಎಫ್‍ಐಆರ್ ದಾಖಲಿಸಿದ್ದಾರೆ.



ಏರ್ ಇಂಡಿಯಾ ಮತ್ತು ಇಂಡಿಯನ್ ಏರ್‍ಲೈನ್ಸ್ ಸಂಸ್ಥೆಗಳ ವಿಲೀನ ಪ್ರಕ್ರಿಯೆಯನ್ನು ಪ್ರಾಥಮಿಕ ತನಿಖೆ ಎಂದು ನೋಂದಾಯಿಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin