ಕರ್ನಾಟಕ ವಿದ್ಯುತ್ ಕಾರ್ಖಾನೆಯಲ್ಲೇ ಟ್ರಾನ್ಸ್’ಫಾರ್ಮರ್ ಗಳ ತಯಾರು : ಡಿಕೆಶಿ

ಈ ಸುದ್ದಿಯನ್ನು ಶೇರ್ ಮಾಡಿ

DKS--001

ಬೆಂಗಳೂರು, ಜೂ.2-ಇನ್ನು ಮುಂದೆ 5 ಸ್ಟಾರ್ ಟ್ರಾನ್ಸ್’ಫಾರ್ಮರ್ ಗಳನ್ನು ಉತ್ಪಾದನೆ ಮಾಡಬೇಕು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು. ಕರ್ನಾಟಕ ವಿದ್ಯುತ್ ಕಾರ್ಖಾನೆಗೆ ಭೇಟಿ ನೀಡಿ ವಿದ್ಯುತ್ ಪರಿವರ್ತಕಗಳ ಉತ್ಪಾದನೆ ಬಗ್ಗೆ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ವಿದ್ಯುತ್ ಕಾರ್ಖಾನೆಯಲ್ಲೇ ಟ್ರಾನ್ಸ್‍ಫಾರ್ಮರ ತಯಾರಿಸಲಾಗುತ್ತಿದೆ. ಜುಲೈ 1 ರಿಂದ ಎಲ್ಲಾ ಟ್ರಾನ್ಸ್‍ಫಾರ್ಮರ್ ತಯಾರಿಕಾ ಕಾರ್ಖಾನೆಗಳಿಗೆ ಈ ಬಗ್ಗೆ ಸೂಚನೆ ನೀಡಲಾಗಿದ್ದು, 5 ಸ್ಟಾರ್ ಟ್ರಾನ್ಸ್‍ಫಾರ್ಮರ್‍ಗಳನ್ನೇ ಉತ್ಪಾದನೆ ಮಾಡಬೇಕು ಎಂದರು.



ಗ್ರಾಮೀಣ ಪ್ರದೇಶದಲ್ಲಿ 4 ಸ್ಟಾರ್ ಹಾಗೂ ನಗರ ಪ್ರದೇಶಗಳಲ್ಲಿ 5 ಸ್ಟಾರ್ ಟ್ರಾನ್ಸ್‍ಫಾರ್ಮರ್‍ಗಳನ್ನೇ ಕಡ್ಡಾಯವಾಗಿ ಬಳಸಬೇಕೆಂದು ತಿಳಿಸಿದರು. 5 ಸ್ಟಾರ್ ಟ್ರಾನ್ಸ್‍ಫಾರ್ಮರ್ ಬಳಕೆಯಿಂದ ಶೇ.25ರಷ್ಟು ಇಂಧನ ಉಳಿತಾಯವಾಗುತ್ತದೆ. ಖರ್ಚು ಕೇವಲ ಶೇ.5ರಷ್ಟು ಆಗಬಹುದು ಎಂದು ಹೇಳಿದರು. ಕಳೆದ ವಾರ ನಗರದಲ್ಲಿ ಬಿದ್ದ ಭಾರೀ ಮಳೆಯಿಂದ ಬೆಸ್ಕಾಂ ವ್ಯಾಪ್ತಿಯಲ್ಲಿ ಒಂದು ಸಾವಿರ ವಿದ್ಯುತ್ ಕಂಬಗಳು ಉರುಳಿವೆ.

ಹೀಗಾಗಿ ಅದನ್ನೆಲ್ಲ ಸರಿಪಡಿಸಲು ಹೆಚ್ಚುವರಿ ಗ್ಯಾಂಗ್‍ಮನ್‍ಗಳ ನೇಮಕ, ಹೆಚ್ಚು ವಾಹನಗಳ ಖರೀದಿ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಕವಿಕಾ ಅಧ್ಯಕ್ಷ ಎಸ್.ಮನೋಹರ್, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin