‘ನನ್ ಗೌರವ ಹಾಳಾಯ್ತು, ಈ ಇಂಧನ ಖಾತೇನೇ ಬೇಡ’ : ಅಧಿಕಾರಿಗಳ ಮೇಲೆ ಡಿಕೆಶಿ ಕೆಂಡಾಮಂಡಲ

ಈ ಸುದ್ದಿಯನ್ನು ಶೇರ್ ಮಾಡಿ

DKShivakumar-01

ಬೆಂಗಳೂರು,ಜೂ.2-ಏನ್ ಕೆಲ್ಸ ಮಾಡ್ತಿದೀರಾ ನೀವೆಲ್ಲಾ? ನನ್ನ ಮರ್ಯಾದೆ ಎಲ್ಲ ಹಾಳ್ ಮಾಡಿದ್ರಿ. ಮೊನ್ನೆ ಮಳೆ ಬಂದು ಸಮಸ್ಯೆ ಆದಾಗ ಎಷ್ಟು ಜನರಿಗೆ ಸ್ಪಂದಿಸಿದ್ದೀರಾ ಲೆಕ್ಕ ಕೊಡಿ ನನಗೆ… ಹೀಗೆಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅಧಿಕಾರಿಗಳ ವಿರುದ್ದ ಹರಿಹಾಯ್ದರು. ಮುಖ್ಯಮಂತ್ರಿಗಳ ಪತ್ರಿಕಾಗೋಷ್ಠಿಯಲ್ಲಿ 10 ನಿಮಿಷ ಕರೆಂಟ್ ಹೋಯ್ತು. ಇದರಿಂದ ನನ್ ಗೌರವ ಹಾಳಾಯ್ತು. ಮಳೆ ಬಂದಾಗ ನಾಗರಿಕರ ಸಮಸ್ಯೆಗಳಿಗೆ ಎಷ್ಟು ಜನ ಅಧಿಕಾರಿಗಳು ಕರೆ ಅಟೆಂಡ್ ಮಾಡಿದ್ದೀರಾ,
ಯಾರ್ಯಾರು ಎಷ್ಟೆಷ್ಟು ದೂರುಗಳನ್ನು ಸ್ವೀಕರಿಸಿದ್ದೀರಾ? ಏನ್ ಕೆಲ್ಸ ಮಾಡ್ತಿದ್ದೀರಾ… ಎಂದು ಒಂದೇ ಸಮನೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ತಮ್ಮ ನಿವಾಸದಲ್ಲಿ ಇಂದು ಅಧಿಕಾರಿಗಳ ಸಭೆ ನಡೆಸಿದ ಡಿ.ಕೆ.ಶಿವಕುಮಾರ್, ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇತ್ತೀಚೆಗೆ ನಗರದಲ್ಲಿ ಮಳೆ ಬಿದ್ದಾಗ ವಿದ್ಯುತ್‍ನಿಂದ ಉಂಟಾದ ಸಮಸ್ಯೆಗಳು, ನಾಗರಿಕರಿಂದ ಬಂದ ಅಹವಾಲುಗಳು ಸ್ವೀಕರಿಸಿರುವ ಬಗ್ಗೆ ವಿವರಗಳನ್ನು ಪಡೆದು ನಿರ್ಲಕ್ಷಿತ ಅಧಿಕಾರಿಗಳ ವಿರುದ್ದ ನಿರ್ದಾಕ್ಷಿಣ್ಯವಾಗಿ ಹರಿಹಾಯ್ದರು.

ಈ ಖಾತೆನೇ ಸಾಕಾಗಿದೆ:

ಇಂಧನ ಖಾತೆನೇ ಸಾಕಾಗಿದೆ. ಈ ಖಾತೆಯಲ್ಲಿದ್ದುಕೊಂಡೇ ಜನರ ಸಮಸ್ಯೆಗೆ ಸ್ಪಂದಿಸಬೇಕಾಗಿದೆ. ಅಷ್ಟಕ್ಕೂ ಗೃಹ ಖಾತೆ ನೀಡುವ ವಿಚಾರ ಸಿಎಂ ವಿವೇಚನೆಗೆ ಬಿಟ್ಟಿದ್ದು . ಯಾವ ಜವಾಬ್ದಾರಿಯನ್ನು ಕೊಟ್ಟರೂ ನಾನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂಬ ವಿಶ್ವಾಸ ಸಿಎಂಗೆ, ಹೈಕಮಾಂಡ್‍ಗೆ ಇದೆ ಎಂದು ಹೇಳಿದರು.   ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಸಿಕ್ಕಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಸ್ಥಾನ ಸಿಕ್ಕಿದಾಗಿನಿಂದ ನಾವೇನು ಕೆಲಸ ಆರಂಭಿಸಿಲ್ಲ. ಮೊದಲಿನಿಂದಲೂ ಪ್ರಚಾರ ಕೆಲಸ ಮಡುತ್ತಲೇ ಇದ್ದೀನಿ ಎಂದರು.

ಮತ್ತೊಮ್ಮೆ ಹೈಕಮಾಂಡ್ ಭೇಟಿ ಮಾಡಲಿದ್ದೀರಾ? ಎಂಬುದಕ್ಕೆ ಉತ್ತರ ನೀಡಿದ ಅವರು, ಪ್ರತಿದಿನ ನಾನು ಹೈಕಮಾಂಡ್ ಜೊತೆ ಸಂಪರ್ಕದಲ್ಲಿದ್ದೇನೆ. ಈ ಬಗ್ಗೆ ಸಮಯ ಬಂದಾಗ ಮಾತನಾಡುತ್ತೇನೆ. ಕೊಟ್ಟಿರುವ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ ಎಂದು ಅವರು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin