ಮುಂಗಾರು ಆರಂಭ, ರೈತರಿಗೆ ರಸಗೊಬ್ಬರ ಕೊರತೆ ಇಲ್ಲ : ಅನಂತ್ ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

Fertilizer----001

ಚಿಕ್ಕಮಗಳೂರು,ಜೂ.2-ಮುಂಗಾರು ಆರಂಭಕ್ಕೆ ರೈತರಿಗೆ ತೊಂದರೆಯಾಗದಂತೆ ಒಂದು ಲಕ್ಷ ಟನ್ ಯೂರಿಯಾ ಮತ್ತು ಐವತ್ತು ಸಾವಿರ ಟನ್ ಇತರೆ ರಸಗೊಬ್ಬರ ಶೇಖರಣೆ ಸಿದ್ದವಾಗಿದ್ದು , ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ಹೇಳಿದರು.
ಶೃಂಗೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಎಪಿ ಗೊಬ್ಬರ ಚೀಲದ ಮೇಲೆ 195 ರೂ. ಮಟಾಶ್ ಚೀಲದ ಮೇಲೆ 250 ರೂ. ಇತರೆ ಗೊಬ್ಬರ ಚೀಲಗಳ ಮೇಲೆ 50 ರೂ. ದರ ನಿಗದಿ ಮಾಡಿದ್ದು, ಯಾರು ಹೆಚ್ಚು ಬೆಲೆಗೆ ಮಾರುವಂತಿಲ್ಲ ಎಂದು ಹೇಳಿದರು.ಈ ವರ್ಷ 278 ದಶಲಕ್ಷ ಟನ್ ಆಹಾರ ಉತ್ಪಾದನೆಯಾಗಿದೆ. ಇದೊಂದು ದಾಖಲೆ. ಕೇಂದ್ರ ಸರ್ಕಾರ 4,500 ಕೋಟಿ ರೂ. ಅನುದಾನವನ್ನು ರಾಜ್ಯಕ್ಕೆ ನೀಡಿದ್ದು , ಕಳೆದ 10 ವರ್ಷಗಳಲ್ಲಿ ಇದು ದಾಖಲಾಗಿದೆ.   ಕೇಂದ್ರ ನೀಡಿದ ಹಣದಲ್ಲಿ 550 ಕೋಟಿ ರೂ. ಬೆಲೆ ನಷ್ಟ ಪರಿಹಾರವನ್ನು ಮುಖ್ಯಮಂತ್ರಿ ಅವರು ಇನ್ನು ವಿತರಣೆ ಮಾಡಿಲ್ಲ. ಇನ್ನೊಂದು ವಾರದೊಳಗಾಗಿ ಪರಿಹಾರ ವಿತರಿಸಬೇಕೆಂದು ಒತ್ತಾಯಿಸಿದರು.  ಜಿಲ್ಲೆಗೆ 25 ಪ್ರಧಾನಿ ಜನೌಷಧಿ ಮಳಿಗೆಗಳು ಮಂಜೂರಾಗಿದ್ದು , ಶೃಂಗೇರಿಯಿಂದ ಮೊದಲು ಆರಂಭವಾಗಲಿದೆ. ಶಾಸಕ ಜೀವರಾಜ್ ನಿರ್ದೇಶನದಂತೆ ಈ ಮಳಿಗೆಗಳು ಆರಂಭವಾಗಲಿವೆ ಎಂದರು.

ಚೇತನ ಸೇವಾ ಸಮಿತಿ ವತಿಯಿಂದ ಕಳೆದ 15 ವರ್ಷಗಳಲ್ಲಿ 48 ಕೋಟಿ ಮಕ್ಕಳಿಗೆ ಬಿಸಿಯೂಟ ನೀಡಲಾಗಿದೆ. ಹಸಿರು ಕರ್ನಾಟಕ ಯೋಜನೆಯಡಿ ಒಂದು ಕೋಟಿ ಗಿಡ ನೆಡುವ ಗುರಿಯಿದ್ದು , ಈಗಾಗಲೇ 60 ಸಾವಿರ ಗಿಡ ನೆಡಲಾಗಿದೆ ಎಂದರು.   ಶೃಂಗೇರಿ ಶಾಸಕ ಜೀವರಾಜ್, ಕಾರ್ಕಳ ಶಾಸಕ ಸುನೀಲ್‍ಕುಮಾರ, ಜಿಲ್ಲಾಪಂಚಾಯತ್ ಸದಸ್ಯ ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin