ಗಡ್ಡ ತೆಗೆಯದ ಮುಸ್ಲಿಂ ಪತಿ ಮೇಲೆ ಕುದಿಯುವ ನೀರು ಎರಚಿದ ಪತ್ನಿ..!

ಈ ಸುದ್ದಿಯನ್ನು ಶೇರ್ ಮಾಡಿ

Muslim--01

ಅಲಿಘರ್(ಉ.ಪ್ರ) ಜೂ.3-ಗಡ್ಡ ತೆಗೆಯುವ ವಿಚಾರದಲ್ಲಿ ಮುಸ್ಲಿಂ ದಂಪತಿ ನಡುವೆ ಉಲ್ಬಣಗೊಂಡ ಜಗಳದಿಂದ ಸುಟ್ಟ ಗಾಯಗೊಂಡ ಪತಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಉತ್ತರಪ್ರದೇಶ ಅಲಿಘರ್‍ನಲ್ಲಿ ನಡೆದಿದೆ.  ತನ್ನ ಪತ್ನಿ ನಗ್ಮಾ ಎರಚಿದ ಕುದಿಯುವ ನೀರಿನಿಂದ ಸುಟ್ಟ ಗಾಯಗೊಂಡ ಪತಿ ಸಲ್ಮಾನ್‍ಖಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.  ಮುಖ, ತಲೆ, ಕೈಗಳಿಗೆ ಸುಟ್ಟು ಗಾಯಗಳಾಗಿ ಬೊಬ್ಬೆ ಬಂದಿದ್ದು, ಗುರುತು ಹಿಡಿಯಲಾರದಷ್ಟು ವಿಕಾರವಾಗಿದ್ದಾನೆ. ಹಣ್ಣು ವ್ಯಾಪಾರಿಯಾಗಿದ್ದ ಸಲ್ಮಾನ್‍ಖಾನ್‍ಗೆ ನಗ್ಮಾ ವಿವಾಹವಾಗಿದ್ದರು. ಆಧುನಿಕ ಜೀವನ ಶೈಲಿಯ ಪತ್ನಿಗೂ, ಕಟ್ಟಾ ಮುಸ್ಲಿಂ ಸಂಪ್ರದಾಯದ ಪತಿಗೂ ಹೊಂದಾಣಿಕೆಯಿರಲಿಲ್ಲ.


ಗಡ್ಡ ತೆಗೆಯುವಂತೆ ಮತ್ತು ಕುರ್ತಾ-ಪೈಜಾಮ ಬದಲಿಗೆ ಜೀನ್ಸ್-ಟೀ ಶರ್ಟ್ ಹಾಕಿಕೊಳ್ಳುವಂತೆ ಪತ್ನಿ ಪತಿಯನ್ನು ಪೀಡಿಸುತ್ತಿದ್ದಳು. ಇದೇ ವಿಷಯವಾಗಿ ಇವರ ಮಧ್ಯೆ ಪದೇ ಪದೇ ಜಗಳವಾಗುತ್ತಿತ್ತು. ಅದು ಈಗ ತಾರಕಕ್ಕೆ ಹೋಗಿ ಸಲ್ಮಾನ್ ಮುಖ ಬೆಂದುಹೋಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin