ನಡು ರಸ್ತೆಯಲ್ಲೇ ಪಿಡಿಒಗೆ ಹಿಗ್ಗಾಮುಗ್ಗಾ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

Acid-Jayalaxmi--01

ಹುಳಿಯಾರು, ಜೂ.3- ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಗ್ರಾಪಂ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತೆ ಆಸಿಡ್ ಜಯಲಕ್ಷ್ಮಮ್ಮ ನಡು ರಸ್ತೆಯಲ್ಲೇ ಹುಳಿ ಯಾರು ಪಿಡಿಒ ಕೃಷ್ಣಾಬಾಯಿ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಇಲ್ಲಿನ ಗ್ರಾಪಂನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಡೆದಿದೆ ಎನ್ನಲಾದ ಕಲ್ಲು ಚಪ್ಪಡಿ ಹಗರಣದ ತನಿಖೆಗೆ ಆಗಮಿಸಿದ್ದ ಎಂಜಿನಿಯರ್ ತಂಡದ ಜತೆಗೆ ಕಾಮಗಾರಿ ವೀಕ್ಷಣೆಗೆ ಪಿಡಿಒ ಕೃಷ್ಣಬಾಯಿ ತೆರಳಿದ್ದ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತೆ ಆಸಿಡ್ ಜಯಲಕ್ಷ್ಮಮ್ಮ ಸೇರಿದಂತೆ ಮೂರನೇ ಬ್ಲಾಕ್‍ನ ನಿವಾಸಿಗಳು ಅವರನ್ನು ತಡೆದು ಚರಂಡಿ ಸ್ವಚ್ಛತೆ, ಕುಡಿಯುವ ನೀರಿನ ನಿರ್ವಹಣೆ, ಬೀದಿ ದೀಪದ ಬಗ್ಗೆ ಪ್ರಶ್ನಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಕಚೇರಿಗೆ ಬಂದು ತಮ್ಮ ದೂರನ್ನು ಲಿಖಿತ ರೂಪದಲ್ಲಿ ಕೊಡಿ ಪರಿಹರಿಸುತ್ತೇವೆ ಎಂದು ಹಾರಿಕೆಯ ಉತ್ತರ ನೀಡಿದರು. ಇದರಿಂದ ಆಕ್ರೋಶಗೊಂಡ ಆಸಿಡ್ ಜಯಲಕ್ಷ್ಮಿ ಎಷ್ಟು ಬಾರಿ ಅರ್ಜಿ ಕೊಡೋದು, ಗ್ರಾಮ ಸಭೆಯಲ್ಲಿ ಅರ್ಜಿ ಕೊಟ್ಟಿದ್ದೇವೆ. ಇಲ್ಲಿನ ನಿವಾಸಿಗಳೊಂದಿಗೆ ಕಚೇರಿಗೆ ಬಂದು ಅರ್ಜಿ ಕೊಟ್ಟಿದ್ದೆವೆ. ದೂರವಾಣಿ ಮೂಲಕ ಹತ್ತಾರು ಬಾರಿ ಮನವಿ ಮಾಡಿದ್ದೇವೆ. ಆದರೂ ನಿರ್ಲಕ್ಷ್ಯ ಧೋರಣೆ ತಾಳಿದ್ದೀರಿ ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin