ಬೆಂಗಳೂರಿನಲ್ಲಿ ನಿಲ್ಲದ ಬ್ಲಾಕ್ ಅಂಡ್ ವೈಟ್ ದಂಧೆ : 2.15 ಕೋಟಿ ಹಳೆ ನೋಟು ವಶ

ಈ ಸುದ್ದಿಯನ್ನು ಶೇರ್ ಮಾಡಿ

Black-Money-And-white-mone

ಬೆಂಗಳೂರು, ಜೂ.3-ನಗರದಲ್ಲಿ ಬ್ಲ್ಯಾಕ್ ಅಂಡ್ ವೈಟ್ ದಂಧೆ ಇನ್ನೂ ಮುಂದುವರೆದಿದೆ. 2.15 ಕೋಟಿ ರೂ. ಹಳೇ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳುತ್ತಿದ್ದಾಗ ದಾಳಿ ನಡೆಸಿರುವ ಬಸವನಗುಡಿ ಪೊಲೀಸರು, ಹಣವನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸದಾಶಿವ, ಹರ್ಷ ಬಂಧಿತ ಆರೋಪಿಗಳು. ಹಳೇ ನೋಟುಗಳನ್ನು ಎಕ್ಸ್‍ಚೇಂಜ್ ಮಾಡಿಕೊಳ್ಳುತ್ತಿದ್ದಾಗ ರೆಡ್‍ಹ್ಯಾಂಡ್ ಆಗಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಚಿಕ್ಕಮಗಳೂರು ಮೂಲದ ಕಾಫಿ ಉದ್ಯಮಿಯೊಬ್ಬರಿಗೆ ಈ ಹಣ ಸೇರಿದ್ದು ಎಂದು ತಿಳಿದುಬಂದಿದೆ.



ಹಣದ ಮೂಲದ ಬಗ್ಗೆ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ. 500 ಮತ್ತು 1000 ಮುಖಬೆಲೆಯ ಹಳೇ ನೋಟುಗಳ ನಿಷೇಧದ ನಂತರ ಬ್ಲ್ಯಾಕ್ ಅಂಡ್ ವೈಟ್ ದಂಧೆ ಮೇಲೆ ತೀವ್ರ ನಿಗಾ ವಹಿಸಿದ್ದ ಪೊಲೀಸರು ಹಲವೆಡೆ ದಾಳಿ ನಡೆಸಿ ಕೋಟ್ಯಂತರ ರೂ.ಗಳನ್ನು ವಶಪಡಿಸಿಕೊಂಡಿದ್ದರು.  ಇತ್ತೀಚೆಗಷ್ಟೆ ಅಪಹರಣ ಹಾಗೂ ದರೋಡೆ ಪ್ರಕರಣದ ತನಿಖೆ ಸಂಬಂಧ ಶ್ರೀರಾಮಪುರದ ಪಾಲಿಕೆ ಮಾಜಿ ಸದಸ್ಯ ವಿ.ನಾಗರಾಜ್ ಅವರ ಮನೆ ಮೇಲೆ ದಾಳಿ ನಡೆಸಿದಾಗ ಹತ್ತಾರು ಕೋಟಿ ರೂಪಾಯಿಗಳ ನೋಟುಗಳು ಪತ್ತೆಯಾಗಿದ್ದವು. ಇದಕ್ಕೂ ಮುನ್ನ ಬೆಂಗಳೂರಿನ ಹಲವೆಡೆ ಪೊಲೀಸರು ನಡೆಸಿದ ದಾಳಿಯಲ್ಲಿ ರಾಜಕಾರಣಿಗಳ ಸಂಬಂಧಿಕರು, ಅಧಿಕಾರಿಗಳ ಮನೆಗಳಲ್ಲೂ ಕೂಡ ಕೋಟ್ಯಂತರ ರೂ. ಹಳೇ ನೋಟುಗಳು ಪತ್ತೆಯಾಗಿದ್ದವು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin