ಖರೀದಿಸಿದ 1 ಗಂಟೆಯೊಳಗೆ ಒಡತಿಯನ್ನೇ ಕೊಂದ ಶ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

Pit-Bull-Dog--01

ವರ್ಜಿನಿಯಾ (ಅಮೆರಿಕ), ಜೂ.4-ಖರೀದಿಸಿದ ಒಂದು ಗಂಟೆಯೊಳಗೇ ನಾಯಿಯೊಂದು 90 ವರ್ಷದ ತನ್ನ ಒಡತಿಯನ್ನೇ ಕೊಂದು ಹಾಕಿದ ಭೀಕರ ಘಟನೆ ಅಮೆರಿಕದ ವರ್ಜಿನಿಯಾದಲ್ಲಿ ನಡೆದಿದೆ. ಫಾರ್ ಎವರ್ ರಿಹ್ಯಾಬಿಲಿಟೇಷನ್ ಸೆಂಟರ್‍ನಿಂದ ಮಾರ್ಗರೇಟ್ ಕಾಲ್ವಿನ್ ಎಂಬ ಮಹಿಳೆ ಪಿಟ್‍ಬುಲ್ ತಳಿಯ ನಾಯಿಯನ್ನು ಖರೀದಿಸಿದ್ದರು. ಮನೆಯ ಮುಂಭಾಗದಲ್ಲಿ ನಾಯಿಯೊಂದಿಗೆ ಆಟವಾಡುತ್ತಿದ್ದ ಮಾರ್ಗರೇಟ್ ಇದ್ದಕ್ಕಿದ್ದಂತೆ ಜೋರಾಗಿ ಕಿರುಚಲು ಆರಂಭಿಸಿದರು. ಅವರ ಪುತ್ರಿ ಲಿಂಡಾ ಸ್ಥಳಕ್ಕೆ ಧಾವಿಸಿದಾಗ ಅಲ್ಲಿನ ದೃಶ್ಯ ಕಂಡು ಬೆಚ್ಚಿ ಬಿದ್ದರು.



ಕೇವಲ ಒಂದು ಗಂಟೆಯ ಹಿಂದಷ್ಟೇ ಖರೀದಿಸಿದ್ದ ನಾಯಿ ವಯೋವೃದ್ಧೆಯನ್ನು ಕಚ್ಚಿ ಎಳೆದಾಡುತ್ತಿತ್ತು. ಆಕೆಯ ಕುತ್ತಿಗೆ, ಭುಜ, ಕಾಲುಗಳನ್ನು ಭೀಕರವಾಗಿ ಕಚ್ಚಿ ಹಾಕಿತ್ತು. ಕೂಡಲೇ ಲಿಂಡಾ ಸುತ್ತಿಗೆಯಿಂದ ನಾಯಿಗೆ ಹೊಡೆದರೂ ಏನೂ ಪ್ರಯೋಜನವಾಗಲಿಲ್ಲ. ಅದು ಮಾರ್ಗರೇಟ್ ಮೇಲೆ ಇನ್ನಷ್ಟು ರೋಷದಿಂದ ದಾಳಿ ನಡೆಸಿತು. ತೀವ್ರ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಮೃತಪಟ್ಟರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin