ಮೈಸೂರಲ್ಲಿ ‘ಟ್ರಿಣ್ ಟ್ರಿಣ್ ಸೈಕಲ್’ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah-Cycle

ಮೈಸೂರು,ಜೂ.4-ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕಂಪ್ಯೂಟರೀಕೃತ ಟ್ರಿಣ್ ಟ್ರಿಣ್ ಸೈಕಲ್ ವಿನೂತನ ಯೋಜನೆಗೆ ಇಲ್ಲಿನ ಹಾರ್ಡಿಂಜ್ ವೃತ್ತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.   ಸಾಂಸ್ಕøತಿಕ ನಗರಿ ಮೈಸೂರು ನಗರದ 18 ಸ್ಥಳಗಳಲ್ಲಿ ಈ ಟ್ರಿಣ್ ಟ್ರಿಣ್ ಸೈಕಲ್‍ಗಳು ಪ್ರವಾಸಿಗರಿಗೆ ಲಭ್ಯವಾಗಲಿದೆ. ಸೈಕಲ್ ಕುರಿತಂತೆ ಎಲ್ಲ ಮಾಹಿತಿಗಳನ್ನೂ ಕಂಪ್ಯೂಟರೀಕೃತಗೊಳಿಸಲಾಗಿದ್ದು , ಯಾರು ಯಾವ ಸ್ಥಳದಲ್ಲಿ ಸೈಕಲ್ ಪಡೆದರೂ ಅದು ಕಂಪ್ಯೂಟರ್‍ನಲ್ಲಿ ದಾಖಲಾಗುತ್ತದೆ.ನಗರದ ರೈಲು ನಿಲ್ದಾಣ, ಗೋಕುಲಂ, ಯಾದವಗಿರಿ, ಸಿದ್ದಾರ್ಥನಗರ ಸೇರಿದಂತೆ 18 ಸ್ಥಳಗಳಲ್ಲಿ ಈ ಸೈಕಲ್‍ಗಳನ್ನು ಪಡೆಯಬಹುದು. ಒಂದು ಸ್ಥಳದಲ್ಲಿ ಸೈಕಲ್ ಪಡೆದವರು ಅದೇ ನಿಲುಗಡೆಗೆ ಬಂದು ವಾಪಸ್ ಬಿಡಬೇಕೆಂಬ ನಿಯಮವಿಲ್ಲ. ಯಾವುದೇ ಸಮೀಪದ ನಿಲುಗಡೆಯಲ್ಲಿ ನೀವು ಪಡೆದ ಸೈಕಲ್‍ನ್ನು ಬಿಡಬಹುದು.   ಬಾಡಿಗೆ ಪಾವತಿಗೆ ಸ್ವೈಪಿಂಗ್ ವ್ಯವಸ್ಥೆಯಿದ್ದು , ಇದನ್ನು ಪ್ರವಾಸಿಗರು ಬಳಸಿಕೊಳ್ಳಬಹುದು. ಪರಿಸರಸ್ನೇಹಿಯಾದ ಈ ಯೋಜನೆ ಕಳೆದ ಹಲವಾರು ದಿನಗಳಿಂದ ನೆನೆಗುದಿಗೆ ಬಿದ್ದಿದ್ದು , ಮೈಸೂರಿಗರು ಕಾತುರದಿಂದ ಇದಕ್ಕಾಗಿ ಕಾಯುತ್ತಿದ್ದರು.ಆದರೆ ಕಾರಣಾಂತರದಿಂದ ಯೋಜನೆಗೆ ಚಾಲನೆ ನೀಡುವುದು ವಿಳಂಬವಾಗಿತ್ತು. ಕೊನೆಗೂ ಇಂದು ಮೈಸೂರು ನಾಗರಿಕರು ಹಾಗೂ ಪ್ರವಾಸಿಗರು ಬಹುದಿನದ ಕನಸು ಇಂದು ನನಸಾದಂತಾಗಿದೆ.   ಪರಿಸರ ಮಾಲಿನ್ಯ ತಡೆಗಟ್ಟುವುದರ ಜೊತೆಗೆ ಪ್ರವಾಸಿಗರು ಮತ್ತು ನಾಗರಿಕರು ಸೈಕಲ್ ಮೇಲೆ ನಗರ ಸಂಚಾರ ನಡೆಸಿ ತಮಗೆ ಬೇಕಾದ ಕಡೆ ತೆರಳುತ್ತ ಸೈಕಲ್ ಸವಾರಿ ಮಜಾ ಅನುಭವಿಸಲು ಅನುಕೂಲವಾದಂತಾಗಿದೆ.  ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ , ಪಾಲಿಕೆ ಮೇಯರ್ ರವಿಕುಮಾರ್, ಆಯುಕ್ತ ಜಗದೀಶ್, ಜಿಲ್ಲಾಧಿಕಾರಿ ರಂದೀಪ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದಲ್ಲದೆ ಪುಸ್ತಕ ಬಿಡುಗಡೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಿನವಿಡೀ ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin