ರಸ್ತೆ ಅಪಘಾತ : ಬೈಕ್ ಸವಾರ ಸೇರಿ ಮೂವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Accident--001

ಸೂಲಿಬೆಲೆ, ಜೂ.4-ಮದುವೆಯ ಆರತಕ್ಷತೆಗೆ ಗ್ರಾಮಸ್ಥರನ್ನು ಕರೆದುಕೊಂಡು ಹೋಗುತ್ತಿದ್ದ ಮಿನಿ ಬಸ್ ಓವರ್‍ಟೇಕ್ ಮಾಡುವ ಭರದಲ್ಲಿ ಉಂಟಾದ ಅಪಘಾತದಲ್ಲಿ ಬೈಕ್ ಸವಾರ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಾಗೇಶ್ (35), ತ್ಯಾಗರಾಜ್(36) ಹಾಗೂ ಮತ್ತೋರ್ವ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 18ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಗಾಯಾಳುಗಳನ್ನು ಹೊಸಕೋಟೆ ಎಂವಿಜೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿದರೆ ಗಾಯಾಳುಗಳ ಪೈಕಿ ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಹೊಸಕೋಟೆ ತಾಲೂಕಿನ ಸಿದ್ದನಹಳ್ಳಿ ಗ್ರಾಮಸ್ಥರು ನಿನ್ನೆ ರಾತ್ರಿ ಸಂಬಂಧಿಕರ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಲಸಲು ಮಿನಿ ಬಸ್‍ವೊಂದರಲ್ಲಿ 30ಕ್ಕೂ ಅಧಿಕ ಮಂದಿ ಹೋಗುತ್ತಿದ್ದರು.

ಹೊಸಕೋಟೆ ಸಮೀಪದ ಕಲ್ಯಾಣ ಮಂಟಪವೊಂದರಲ್ಲಿ ಆರತಕ್ಷತೆ ಇತ್ತು.ರಾತ್ರಿ ಸುಮಾರು 8.30ರಲ್ಲಿ ಮಿನಿ ಬಸ್ ಚಿಂತಾಮಣಿ, ಹೊಸಕೋಟೆ ಮಾರ್ಗದಲ್ಲಿ ಹೋಗುತ್ತಿದ್ದಾಗ ಹೆದ್ದಾರಿಯ ಡಿ.ಶೆಟ್ಟಹಳ್ಳಿ, ಸತ್ಯವಾರ ಗ್ರಾಮ ನಡುವಿನ ನಾರಾಯಣಗೌಡ ಎಂಬಾತನಿಗೆ ಸೇರಿದ ಜಮೀನು ಸಮೀಪದಲ್ಲಿ ವಾಹನಗಳು ಒಂದಕ್ಕೊಂದು ಓವರ್ ಟೇಕ್ ಮಾಡುವಾಗ ಅಪಘಾತ ನಡೆದಿದೆ.  ಮಡಿಕೇರಿ ಚಿಂತಾಮಣಿಯ ಶಾರದಮ್ಮ, ಸಿದ್ದನಹಳ್ಳಿಯ ವೆಂಕಟಪ್ಪ, ರಾಜಣ್ಣ, ಲಕ್ಷಮ್ಮ, ದೇವರಾಜ್, ಸುಬ್ರಹ್ಮಣಿ, ನವೀನ್, ಸರಸ್ವತಿ, ಮುನಿಕೆಂಪಣ್ಣ, ಶಾರದಮ್ಮ, ನಾರಾಯಣಸ್ವಾಮಿ, ಪ್ರವೀಣ್ ಕುಮಾರ್, ಶ್ರೀನಿವಾಸ್‍ಗೌಡ ಮತ್ತಿತರರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಾರ್ಚೂನರ್ ಕಾರು ಹೊಸಕೋಟೆ ಕಡೆಯಿಂದ ನಂದಗುಡಿಯತ್ತ ಬರುತ್ತಿತ್ತು. ನಂದಗುಡಿಯಿಂದ ಹೊಸಕೋಟೆ ಕಡೆ ಮಿನಿ ಬಸ್ ಹೊರಟಿತ್ತು. ಈ ಎರಡು ವಾಹನಗಳು ಓವರ್ ಟೇಕ್ ಮಾಡುವಾಗ ಎದುರಿಗೆ ಬರುತ್ತಿದ್ದ ಬೈಕ್‍ಗೆ ಡಿಕ್ಕಿ ಹೊಡೆದಿವೆ. ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ನಂತರ ಮಿನಿ ಬಸ್ ಪಲ್ಟಿಯಾಗಿದೆ. ಪಾರ್ಚೂನರ್ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಾಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.   ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin