ಅಭಿನವ್ ಬಿಂದ್ರಾ ಬಯೋಪಿಕ್‍ನಲ್ಲಿ ಅನಿಲ್ ಕಪೂರ್ ಪುತ್ರ

ಈ ಸುದ್ದಿಯನ್ನು ಶೇರ್ ಮಾಡಿ

Kapoor Medi

ಎಲ್ಲವೂ ಅಂದುಕೊಂಡಂತೆ ಆದಲ್ಲಿ, ಭಾರತೀಯ ವೃತ್ತಿಪರ ಶೂಟರ್ ಮತ್ತು ಒಲಂಪಿಕ್ ಪದಕ ವಿಜೇತ ಅಭಿನವ್ ಬಿಂದ್ರಾ ಜೀವನಸಾಧನೆ ಕುರಿತ ಬಯೋಪಿಕ್ ಸಿನಿಮಾ ಶೀಘ್ರ ಸೆಟ್ಟೇರಲಿದೆ. ತಮ್ಮ ಪುತ್ರ ಹರ್ಷವರ್ಧನ್ ಜೊತೆ ಅನಿಲ್ ಕಪೂರ್ ನಟಿಸುತ್ತಿರುವುದು ಈ ಚಿತ್ರದ ಇನ್ನೊಂದು ವಿಶೇಷ. ಅಪ್ಪ-ಮಗ ಹೊಸ ಪ್ರಾಜೆಕ್ಟ್‍ಗೆ ಈಗಾಗಲೇ ಸಹಿ ಮಾಡಿದ್ದಾರೆ ಎಂದು ವರದಿಯೊಂದು ಖಚಿತಪಡಿಸಿದೆ. ಹರ್ಷವರ್ಧನ್ ಕಪೂರ್ ಅಭಿನವ್ ಬಿಂದ್ರಾ ಪಾತ್ರದಲ್ಲಿ ನಟಿಸುತ್ತಿದ್ದಾನೆ.
ಈ ಹೊಸ ಯೋಜನೆ ಬಗ್ಗೆ ಸಿನಿ ಪತ್ರಕರ್ತರು ಮಾತಿಗೆಳೆದಾಗ ಅನಿಲ್ ಕಪೂರ್ ಹೇಳಿದ್ದು : ಈ ಸಿನಿಮಾ ಬಗ್ಗೆ ಮಾತನಾಡಲು ಕಾಲ ಪಕ್ವವಾಗಿಲ್ಲ. ಎಲ್ಲವೂ ಅಂತಿಮಗೊಂಡರೆ, ಈ ಬಗ್ಗೆ ನಾನು ಮಾತನಾಡುತ್ತೇನೆ.


 

ಈಗ ಈ ಪ್ರಾಜೆಕ್ಟ್ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಯಾವುದೂ ಇನ್ನೂ ನಿಕ್ಕಿಯಾಗಿಲ್ಲ. ದೇವರು ಬಯಸಿದರೆ ನಾವಿಬ್ಬರು ಒಟ್ಟಿಗೆ ನಟಿಸುತ್ತೇವೆ. ಆತನೊಂದಿಗೆ ಕೆಲಸ ಮಾಡಲು ನಾನು ತುಂಬಾ ಭಾವೋದ್ವೇಗಗೊಂಡಿದ್ದೇನೆ. ಆದರೆ ಈ ಬಗ್ಗೆ ಈಗ ಮಾತನಾಡುವುದು ಅಪಕ್ವವಾಗುತ್ತದೆ..
ಇನ್ನೊಂದು ಮೂಲದ ಪ್ರಕಾರ ಈ ಸಿನಿಮಾ ಅಕ್ಟೋಬರ್‍ನಲ್ಲಿ ಸೆಟ್ಟೇರಲಿದೆ. ಅಭಿನವ್ ಬಿಂಧ್ರಾ ಜೀವನ ಮತ್ತು ಸಾಧನೆಯೊಂದಿಗೆ ತಂದೆ ಮತ್ತು ಮಗನ ಸಂಬಂಧದ ನವಿರಾದ ಎಳೆಯನ್ನೂ ಈ ಸಿನಿಮಾ ಹೊಂದಲಿದೆ. 60 ವರ್ಷದ ನಟ ಅನಿಲ್ ತಮ್ಮ ಮಗನೊಂದಿಗೆ ಸಿನಿಮಾದಲ್ಲಿ ತಂದೆಯ ಪಾತ್ರ ನಿರ್ವಹಿಸುತ್ತಿರುವುದು ಕುತೂಹಲಕ್ಕೂ ಕಾರಣವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin