ಎನ್‍ಡಿಟಿವಿ ಸಂಸ್ಥಾಪಕ ಪ್ರಣಯ್ ರಾಯ್ ಮನೆ ಮೇಲೆ ಸಿಬಿಐ ದಾಳಿ, ಶೋಧ

ಈ ಸುದ್ದಿಯನ್ನು ಶೇರ್ ಮಾಡಿ

NDTV--01

ನವದೆಹಲಿ, ಜೂ.5- ಎನ್‍ಡಿಟಿವಿ (ನ್ಯೂ ಡೆಲ್ಲಿ ಟೆಲಿವಿಷನ್) ಸಂಸ್ಥಾಪಕ ಪ್ರಣಯ್ ರಾಯ್ ಅವರ ದೆಹಲಿ ಹಾಗೂ ಡೆಹ್ರಾಡೂನ್‍ನ ನಿವಾಸಗಳ ಮೇಲೆ ಕೇಂದ್ರೀಯ ತನಿಖಾ ದಳ-ಸಿಬಿಐ ಇಂದು ದಾಳಿ ಮಾಡಿ ಶೋಧ ನಡೆಸಿತು. ಖಾಸಗಿ ಬ್ಯಾಂಕೊಂದಕ್ಕೆ ನಷ್ಟ ಉಂಟು ಮಾಡಿದ ಆರೋಪದ ಮೇಲೆ ಸಿಬಿಐ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.  ಐಸಿಐಸಿಐ ಬ್ಯಾಂಕಿಗೆ 18 ಕೋಟಿ ರೂ.ಗಳ ನಷ್ಟಕ್ಕೆ ಕಾರಣವಾದ ಆರೋಪದ ಮೇಲೆ ಪ್ರಣಯ್ ರಾಯ್, ಅವರ ಪತ್ನಿ ರಾಧಿಕಾ ಮತ್ತು ಆರ್‍ಆರ್‍ಪಿಆರ್ ಹೋಲ್ಡಿಂಗ್ಸ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.



ಈ ಸಂಬಂಧ ರಾಜಧಾನಿ ಮತ್ತು ಡೆಹ್ರಾಡೂನ್‍ನ ನಾಲ್ಕು ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿ ಶೋಧ ನಡೆಸಿತು ಎಂದು ಮೂಲಗಳು ಹೇಳಿವೆ.

ದಾಳಿಗೆ ಖಂಡನೆ :

ಪ್ರಣಯ್ ರಾಯ್ ನಿವಾಸಗಳ ಮೇಲೆ ನಡೆದ ಸಿಬಿಐ ದಾಳಿಯನ್ನು ಖಂಡಿಸಿರುವ ಎನ್‍ಡಿಟಿವಿ ಮತ್ತು ಅದರ ಪ್ರವರ್ತಕರು, ತನಿಖಾ ಸಂಸ್ಥೆಯ ಏಕಪಕ್ಷೀಯ ಕ್ರಮದ ವಿರುದ್ಧ ಹೋರಾಡುವುದಾಗಿ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin