ಕೊಮೊಡೊ ಡ್ರಾಗನ್ ವೇಷದಲ್ಲಿ ಬೆದರಿಸಿದ ಹಾಸ್ಯಗಾರನಿಗೆ ಶಾರುಖ್ ಪಂಚ್…! (Video)

ಈ ಸುದ್ದಿಯನ್ನು ಶೇರ್ ಮಾಡಿ

sHARUKHA--001

ದುಬೈ, ಜೂ.5- ಕೊಮೊಡೊ (ಡ್ರಾಗನ್) ವೇಷ ತೊಟ್ಟು ಹೆದರಿಸಿದ ಈಜಿಪ್ಟ್‍ನ ಖ್ಯಾತ ಹಾಸ್ಯಗಾರನೊಬ್ಬನಿಗೆ ಸೂಪರ್‍ಸ್ಟಾರ್ ಶಾರುಖ್ ಖಾನ್ ಗೂಸಾ ಕೊಟ್ಟ ವಿಲಕ್ಷಣ ಪ್ರಸಂಗವೊಂದು ಸೌದಿ ಮರಭೂಮಿಯಲ್ಲಿ ನಡೆದಿದೆ.


ಆಗಿದಿಷ್ಟು:
ಅಧಿಕೃತ ಕಾರ್ಯಕ್ರಮದ ನಿಮಿತ್ತ ಬಾಲಿವುಡ್ ಬಾದ್‍ಶಾ ಶಾರುಖ್ ಖಾನ್ ದುಬೈಗೆ ತೆರಳಿದ್ದರು. ದರ್ಶನವೊಂದರ ಬಳಿಕ ಟಿವಿ ನಿರೂಪಕಿ ನಿಶಾನ್ ಜೊತೆ ಮರುಭೂಮಿಯಲ್ಲಿ ಚಿತ್ರೀಕರಣಕ್ಕೆ ಹೋಗುತ್ತಿದ್ದರು. ಇದೊಂದು ಬೆದರಿಸುವ ಅಣಕು ಪ್ರದರ್ಶನದ ಶೂಟಿಂಗ್ ಆಗಿತ್ತು. ಅವರಿದ್ದ ಮರುಭೂಮಿಯಲ್ಲಿ ಕೆಟ್ಟು ಹೋಗಿ ಕಾರು ಮಣ್ಣಿನಲ್ಲಿ ಹುದುಗಲಾರಂಭಿಸಿತು. ಚಾಲಕ ಮಣ್ಣಿನಲ್ಲಿ ಹೂತು ಹೋದ. ಎಸ್‍ಆರ್‍ಕೆ ಅಪಾಯಕ್ಕೆ ಸಿಲುಕಿದ್ದರೂ ಶಾಂತಚಿತ್ತರಾಗಿ ಪರಿಸ್ಥಿತಿ ನಿಭಾಯಿಸಲು ಯತ್ನಿಸಿದರು. ಪ್ರಾಣಭಯದಿಂದ ಆತಂಕಗೊಂಡಿದ್ದ ಟಿವಿ ತಾರೆಯನ್ನು ಸಮಾಧಾನಪಡಿಸುತ್ತಿದ್ದರು.

ಇದೇ ವೇಳೆ, ಈಜಿಪ್ಟ್‍ನ ಖ್ಯಾತ ಹಾಸ್ಯಗಾರ ಹಾಗೂ ರಮೀಜ್ ಅಂಡರ್‍ಗ್ರೌಂಡ್ ಶೋನ ನಿರೂಪಕ ರಮೀಜ್ ಗಲಾಲ್ ಭಯಾನಕ ಕೊಮೊಡೋ ಡ್ರಾಗನ್ ವೇಷಧರಿಸಿ ಪ್ರಾಣಿಯಂತೆ ಹೆಜ್ಜೆ ಹಾಕುತ್ತಾ, ಬುಸುಗುಡುತ್ತಾ ಶಾರುಖ್ ಮತ್ತು ನಿಶಾನ್ ಬಳಿ ಧಾವಿಸಿದ. ಆ ದೈತ್ಯ ಪ್ರಾಣಿಯನ್ನು ಬೆದರಿಸಲು ಎಸ್‍ಆರ್‍ಕೆ ಮರಳನ್ನು ಅದರತ್ತ ಎಸೆದರು. ಆ ಸರಿಸೃಪ ಹೆದರಿಲಿಲ್ಲ. ಎಸ್‍ಆರ್‍ಕೆಯನ್ನು ಕೆಲವು ನಿಮಿಷಗಳು ಹೆದರಿಸಿದ ನಂತರ ಗಲಾಲ್ ತನ್ನ ನಿಜರೂಪವನ್ನು ತೋರಿಸಿದ.

ಇದು ಭಯಪಡಿಸುವ ಅಣಕು ಪ್ರದರ್ಶನ ಎಂಬುದನ್ನು ತಿಳಿದ ಶಾರುಖ್ ಇದನ್ನು ಗಂಭೀರವಾಗಿ ಪರಿಗಣಿಸಿದ. ಸೂಪರ್‍ಸ್ಟಾರ್‍ನನ್ನೇ ಹೆದರಿಸಿದೇ ಎಂದು ತಮಾಷೆಯಾಗಿ ಬೀಗುತ್ತಿದ್ದ ಗಲಾಲ್‍ಗೆ ಖಾನ್ ಫಿಲ್ಮಿ ಸ್ಟೈಲ್‍ನಲ್ಲಿ ಗದರಿದ. ಇದು ಮೂರ್ಖತನದ ಉಪದ್ರವ. ಇದಕ್ಕಾಗಿಯೇ ನೀನು ನನ್ನನ್ನು ಭಾರತದಿಂದ ಇಲ್ಲಿಗೆ ಕರೆಸಿದ್ದು ಎಂದು ಸೂಪರ್‍ಸ್ಟಾರ್ ಅವಾಜ್ ಹಾಕಿ ಆತನನ್ನು ಜೋರಾಗಿ ಕೆಳಗೆ ತಳ್ಳಿ ಕಾಲನ್ನು ಹಿಡಿದು ಧರಧರನೆ ಎಳೆದು ಎರಡೇಟು ಕೊಟ್ಟರು. ಆತನ ಮುಖಕ್ಕೆ ಸರಿಯಾಗಿ ಪಂಚ್ ಮಾಡಲು ಗುರಿ ಇಟ್ಟ ಖಾನ್ ನಂತರ ತನ್ನ ನಿರ್ಧಾರ ಬದಲಿಸಿ ಕಾಮಿಡಿ ಸ್ಟಾರ್‍ನನ್ನು ಶಪಿಸುತ್ತಾ ದೂರ ನಡೆದರು.

ಖಾನ್‍ಗೆ ಕಡುಕೋಪ ಬಂದಿರುವುದನ್ನು ಕಂಡು ಗಲಾಲ್ ತಾಪವನ್ನು ನಂದಿಸಲು ಬಿಲ್ಲು ಸಿನಿಮಾದ ಮರ್ಜಾನಿ ಮರ್ಜಾನಿ ಹಾಡನ್ನು ಗುನುಗಿದ. ಶಾರುಖ್ ಕೋಪ ಮಾಯವಾಗಿ ಮುಗುಳ್ನಗೆ ಮೂಡಿತು. ಗಲಾಲ್ ಕ್ಷಮೆಯಾಚಿಸುತ್ತಿದ್ದರೂ ಅದನ್ನು ಕೇಳಿಸಿಕೊಳ್ಳದೇ ಕಾರಿನತ್ತ ಹೆಜ್ಜೆ ಹಾಕಿದ. ನಂತರ ಗಲಾಲ್ ಈ ಪ್ರಸಂಗವನ್ನು ಎಸ್‍ಆರ್‍ಕೆ ಜೊತೆ ಸೆಲ್ಫೀಯೊಂದಿಗೆ ಹಾಸ್ಯಮಯವಾಗಿ ಇನ್ಸ್‍ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾನೆ.ಈಜಿಪ್ಟ್‍ನ ಈ ಕಾಮಿಡಿ ಸ್ಟಾರ್ ಈ ಹಿಂದೆಯೂ ಅಂತಾರಾಷ್ಟ್ರೀಯ ಖ್ಯಾತನಾಮರನ್ನು ಭಯಭೀತಗೊಳಿಸಿದ್ದಾನೆ. ಪ್ಯಾರಿಸ್ ಹಿಲ್ಟನ್, ಅಂಟೋನಿಯೋ ಬಂಡರೇಸ್ ಅವರನ್ನು ಭಯಾನಕ ವೇಷದಲ್ಲಿ ಹೆದರಿಸಿದ್ದಾನೆ. ಈತ ನಟಿ ಹಿಲ್ಟನ್‍ರನ್ನು ಅಣುಕು ವಿಮಾನ ದುರಂತದಲ್ಲಿ ಭೀತಿ ಹುಟ್ಟಿಸಿದ್ದ. ಇದಕ್ಕಾಗಿ ಆಕೆ ಈ ಶೋ ಮತ್ತು ಗಲಾಲ್ ವಿರುದ್ಧ ದಾವೆ ಹೂಡಿದ್ದಳು.

 

Facebook Comments

Sri Raghav

Admin