ಜನರನ್ನು ದಾರಿ ತಪ್ಪಿಸುವದರಲ್ಲಿ ಎಂ.ಬಿ. ಪಾಟೀಲ್ ಪಳಗಿದ್ದಾರೆ : ಯಡಿಯೂರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

Expert--01

ಹುಬ್ಬಳ್ಳಿ,ಜೂ.5- ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರು ಜಾಹೀರಾತು ನೀಡಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಜಾಹೀರಾತಿನಲ್ಲಿ ನೀಡಿದ ಯೋಜನೆಗಳೆಲ್ಲ ಸುಳ್ಳು. ಈ ಮೂಲಕ ಜನರನ್ನ ದಾರಿ ತಪ್ಪಿಸುವದರಲ್ಲಿ ಎಂ.ಬಿ. ಪಾಟೀಲ್ ಪಳಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿರುಗೇಟು ನೀಡಿದರು.  ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಲಸಂಪನ್ಮೂಲ ಇಲಾಖೆಯಲ್ಲಿ ಎಷ್ಟು ಹಣ ಖರ್ಚು ಮಾಡಿದ್ದಾರೆ ಅಂತ ಹೇಳಲಿ. ಕೇವಲ ಜನರ ಕಣ್ಣಿಗೆ ಕೆಸರೆರಚುವ ಕೆಲಸ ನೀರಾವರಿ ಸಚಿವರಿಂದ ಆಗಬಾರದು ಎಂದರು.ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು. ನಾನು ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದೆ ಎಂದ ಅವರು ಅಧಿವೇಶನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಸುತ್ತೇವೆ. ಈಗಾಗಲೇ ನೀರಾವರಿ ಇಲಾಖೆ ಸೇರಿದಂತೆ ಇತರ ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆ ಮಾಡಲು ನಿರ್ಧಾರಿಸಲಾಗಿದೆ ಎಂದರು. ಇಂದಿನಿಂದ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡುತ್ತೇನೆ. ಜನರ ಕಷ್ಟಕ್ಕೆ ಸ್ಪಂದಿಸುತ್ತೇನೆ. ಅದು ನನ್ನ ಕರ್ತವ್ಯ ಎಂದ ಅವರು ಇನ್ನು ದಲಿತರ ಮನೆಯಲ್ಲಿ ಉಪಹಾರ, ಊಟದ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ ಟೀಕೆಗೆ ಪ್ರತಿಕ್ರಿಯೆ ನೀಡಿದರು.ಪರಮೇಶ್ವರ ಮೊದಲು ಅರಿಯಬೇಕು ನಾನು ದಲಿತರ ಮನೆಯಲ್ಲಿ ಉಪಹಾರ, ಊಟ ಏಕೆ ಮಾಡುತ್ತೇನೆ ಅಂತ. ದಲಿತರ ನೋವು ನಲಿವಿಗೆ ಸ್ಪಂದಿಸುತ್ತೇನೆ. ದಲಿತರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರಿಯಲಿಕ್ಕೆ ಈ ಪ್ರವಾಸ ಮಾಡುತ್ತಿದ್ದೇನೆ. ಕೇವಲ ರಾಜಕಾರಣಕ್ಕೆ ನಾನು ದಲಿತರ ಮನೆಗೆ ಹೋಗುತಿಲ್ಲ ಎಂದು ಅವರು ತಿರುಗೇಟು ನೀಡಿದರು.   2018ರ ಚುನಾವಣೆಯಲ್ಲಿ 150 ಸ್ಥಾನ ಪಡೆಯಲಾಗುವುದು ಎಂಬ ಬಗ್ಗೆ ಸಿಎಂ ಟೀಕೆಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ ನಾನು ಮಿಷನ್ ಪಾಕೇಟ್‍ನಲ್ಲಿ ಇಟ್ಟುಕೊಂಡು ಓಡಾಡುತ್ತಿಲ್ಲ. ಜನರು ನನ್ನ ಜೊತೆ ಇದ್ದಾರೆ. ಆ ವಿಶ್ವಾಸದಿಂದ ಹೇಳುತ್ತೇನೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin