‘ಪಾಕಿಸ್ತಾನಕ್ಕೆ ತೊಲಗು, ಇಲ್ಲದಿದ್ದರೆ ನಿನ್ನನ್ನು ಉಳಿಸಲ್ಲ’ : ಬಿಬಿಎಂಪಿ ಜಂಟಿ ಆಯುಕ್ತರಿಗೆ ಕೊಲೆ ಬೆದರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Sarfaraj-Khan--01

ಬೆಂಗಳೂರು, ಜೂ.5-ನೀವು ನಮ್ಮ ತಂಟೆಗೆ ಬಂದರೆ ಹುಷಾರ್. ನಿಮ್ಮನ್ನು ಜೀವಸಹಿತ ಉಳಿಸುವುದಿಲ್ಲ. ನಿಮ್ಮ ಧೋರಣೆ ಹೀಗೇ ಮುಂದುವರೆದರೆ ಪಾಕಿಸ್ತಾನಕ್ಕೆ ಕಳುಹಿಸಬೇಕಾಗುತ್ತದೆ. ಹೀಗಂತ ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್‍ಖಾನ್ ಅವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ.  ಸರ್ಫರಾಜ್‍ಖಾನ್ ಅವರಿಗೆ ಕೊಲೆ ಬೆದರಿಕೆ ಪತ್ರ ರವಾನಿಸಿರುವ ಕಿಡಿಗೇಡಿಗಳು ಪತ್ರದ ಮೇಲೆ ಹಲಸೂರಿನ ಬಜಾರ್ ಸ್ಟ್ರೀಟ್‍ನಲ್ಲಿರುವ ಬಿಜೆಪಿ ಕಚೇರಿಯ ವಿಳಾಸ ನಮೂದಿಸಿದ್ದಾರೆ. ಬಿಬಿಎಂಪಿ ಘನತ್ಯಾಜ್ಯ ನಿರ್ವಹಣಾವಿಭಾಗದ ಜಂಟಿ ಆಯುಕ್ತರಾಗಿರುವ ಸರ್ಫರಾಜ್‍ಖಾನ್ ಅವರು ತ್ಯಾಜ್ಯ ನಿರ್ವಹಣೆ ಕುರಿತಂತೆ ಆಗಾ ಅಬ್ಬಾಸ್ ಆಲಿ ರಸ್ತೆಯಲ್ಲಿರುವ ವಾಣಿಜ್ಯ ಸಂಕೀರ್ಣಗಳಿಗೆ ನೋಟಿಸ್ ಜಾರಿ ಮಾಡಿದ್ದರು.ಈ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ಹಲಸೂರಿನ ಬಿಜೆಪಿ ಕಚೇರಿ ವಿಳಾಸ ನೀಡಿ ಖಾನ್ ಅವರಿಗೆ ಜೀವಬೆದರಿಕೆಯ ಪತ್ರ ರವಾನಿಸಿದ್ದಾರೆ.  ನೀವು ನಿಮ್ಮ ಪಾಡಿಗೆ ನಿಮ್ಮ ಕೆಲಸ ಮಾಡಿಕೊಂಡು ಹೋಗಿ. ನಮ್ಮ ತಂಟೆಗೆ ಬಂದರೆ ಹುಷಾರ್. ವಾಣಿಜ್ಯ ಸಂಕೀರ್ಣಗಳ ಉಸಾಬರಿ ನಿಮಗೇಕೆ ? ನಿಮ್ಮ ಧೊರಣೆಯನ್ನು ಮುಂದುವರಿಸಿದ್ದೇ ಆದರೆ ನಿಮ್ಮನ್ನು ಮುಗಿಸಬೇಕಾಗುತ್ತದೆ ಅಥವಾ ಪಾಕಿಸ್ತಾನಕ್ಕೆ ರವಾನಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

63ee6f10-2dc8-41f3-84b0-e597c2c4ccfc
ತಮಗೆ ಬಂದಿರುವ ಜೀವ ಬೆದರಿಕೆ ವಿಷಯವನ್ನು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರ ಗಮನಕ್ಕೆ ತಂದು ಪೊಲೀಸ್ ಠಾಣೆಗೆ ದೂರು ನೀಡಲಾಗುವುದು ಎಂದು ಸರ್ಫರಾಜ್‍ಖಾನ್ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin