ಬಿ.ಎಡ್ ಪ್ರಶ್ನೆ ಪತ್ರಿಕೆ ಬಹಿರಂಗ, ವಿದ್ಯಾರ್ಥಿಗಳ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

Question-Paper--v

ಕಲಬುರಗಿ, ಜೂ.5- ಬಿ.ಎಡ್ ಎರಡನೆ ಸೆಮಿಸ್ಟರ್‍ನ ಪ್ರಶ್ನೆಪತ್ರಿಕೆ ಬಹಿರಂಗಗೊಂಡಿರುವ ಬಗ್ಗೆ ಮೌಲ್ಯಮಾಪನ ಕುಲಸಚಿವರಿಗೆ ಮಾಹಿತಿ ನೀಡಿದ್ದರೂ ಇಂದು ಬೆಳಗ್ಗೆ ಪರೀಕ್ಷೆ ನಡೆಸಿರುವ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ರಾತ್ರಿಯೇ 2ನೆ ಸೆಮಿಸ್ಟರ್ ಬಿಎಡ್ ಪರೀಕ್ಷೆಯ ಪ್ರಶ್ನೆಪತ್ರಿಕೆ ವಾಟ್ಸಪ್‍ಗಳಲ್ಲಿ ಹರಿದಾಡಿತ್ತು. ಈ ವಿಚಾರವನ್ನು ವಿವಿ ಮೌಲ್ಯಮಾಪನ ಕುಲಸಚಿವರಿಗೆ ವಿದ್ಯಾರ್ಥಿಗಳೇ ಮಾಹಿತಿ ನೀಡಿದ್ದರು.


ಶೈಕ್ಷಣಿಕ ಹಾಗೂ ಕೌಶಲ್ಯ ವಿಧಾನ ಎಂಬ ವಿಷಯಗಳ ಪ್ರಶ್ನೆಪತ್ರಿಕೆ ಬಹಿರಂಗಗೊಂಡಿತ್ತು. ಆದರೆ ಇಂದು ಬೆಳಗ್ಗೆ ಈ ಪರೀಕ್ಷೆ ನಡೆಸಿದ್ದು, ಇದಕ್ಕೆ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin