ಮಂಡ್ಯದಲ್ಲಿ ಪ್ಲಾಸ್ಟಿಕ್ ಅಕ್ಕಿ, ಅನ್ನ ಮಾಡಿ ತಿಂದವರು ಆಸ್ಪತ್ರೆ ಸೇರಿದರು..!

ಈ ಸುದ್ದಿಯನ್ನು ಶೇರ್ ಮಾಡಿ

Plastic-Rice--01

ಮಂಡ್ಯ,ಜೂ.5-ರಾಜಧಾನಿ ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಮೊಟ್ಟೆ ಮಾರಾಟ ಮಾಡುತ್ತಿರುವ ಬಗ್ಗೆ ಟಿವಿಯಲ್ಲಿ ನೋಡಿದ್ದೀರಿ ಅಥವಾ ಪತ್ರಿಕೆಯಲ್ಲಿ ಓದಿದ್ದೀರಾ ಇದೀಗ ಅಂಥದೇ ಪ್ರಕರಣ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದಿದೆ. ಮದ್ದೂರು ಪಟ್ಟಣದ ನಿವಾಸಿ ಕೃಷ್ಣ ನಿವಾಸಿ ಎಂಬುವರು ಕುಟುಂಬ ಪ್ಲಾಸ್ಟಿಕ್ ಅಕ್ಕಿಯನ್ನು ಬೇಯಿಸಿ ಊಟ ಮಾಡಿದ ಬಳಿಕ ಹೊಟ್ಟೆನೋವು ಕಾಣಿಸಿಕೊಂಡು ಆಸ್ಪತ್ರೆ ಸೇರಿರುವ ಘಟನೆ ನಡೆದಿದೆ.



ಕೃಷ್ಣ ಅವರು ಮನೆಯ ಸಮೀಪವಿರುವ ದಿನಸಿ ಅಂಗಡಿಯಲ್ಲಿ 25 ಕೆಜಿ ಅಕ್ಕಿ ಮೂಟೆ ತಂದಿದ್ದಾರೆ. ಮೂಟೆಯಲ್ಲಿದ್ದ ಅಕ್ಕಿಯನ್ನು ಬೇಯಿಸಿ ಊಟ ಮಾಡಿದ ನಂತರ ಕುಟುಂಬದವರಿಗೆ ದಿಢೀರ್ ಹೊಟ್ಟೆನೋವು ಕಾಣಿಸಿಕೊಂಡಿದೆ. ತಕ್ಷಣ ಸ್ಥಳೀಯರು ಅವರನ್ನು ಆಸ್ಪತ್ರೆ ದಾಖಲಿಸಿದ್ದು , ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅನುಮಾನಗೊಂಡ ಕೃಷ್ಣ ಮನೆಗೆ ತಂದಿದ್ದ ಅಕ್ಕಿಯನ್ನು ನೀರಿನೊಳಗೆ ಹಾಕಿ ಬೇಯಿಸಿದಾಗ ಅಕ್ಕಿಯಲ್ಲಿದ್ದ ಪ್ಲಾಸ್ಟಿಕ್ ಕರಗಿ ಉಂಡೆಯಾಗಿದೆ. ಅಕ್ಕಿ ಎಂಬುದು ಪತ್ತೆಯಾಗಿದೆ. ಈ ಬಗ್ಗೆ ಕೃಷ್ಣ ಅವರು ತಹಸೀಲ್ದಾರ್‍ಗೆ ದೂರು ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin