ಮತ್ತೊಮ್ಮೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಮುಂದಾದ ಲಾರಿ ಮಾಲೀಕರು

ಈ ಸುದ್ದಿಯನ್ನು ಶೇರ್ ಮಾಡಿ

Lorry

ಬೆಂಗಳೂರು, ಜೂ.5-ಲಾರಿ ಮಾಲೀಕರು ಮತ್ತೊಮ್ಮೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಮುಂದಾಗಿದ್ದಾರೆ. ಕನ್ನಂಬಾಡಿಯಲ್ಲಿ ಮರಳು ಹಾಗೂ ಹೂಳು ತೆಗೆಯಲು ಅವಕಾಶ ನೀಡಬೇಕೆಂದು ಆಗ್ರಹಿಸಿ ವಾರಾಂತ್ಯದಲ್ಲಿ ಪ್ರತಿಭಟನೆ ನಡೆಸಲು ಲಾರಿ ಮಾಲೀಕರು ನಿರ್ಧರಿಸಿದ್ದಾರೆ. ಈಗಾಗಲೇ ಮೆಟ್ಟೂರು ಡ್ಯಾಂನಲ್ಲಿ ಹೂಳು ಮತ್ತು ಮರಳು ತೆಗೆಯಲು ಅವಕಾಶ ನೀಡಲಾಗಿದ್ದು, 22,735 ರೈತರಿಗೆ ಅನುಕೂಲವಾಗಿದೆ. ನಾಲ್ಕು ಲಕ್ಷ ಕ್ಯೂಬಿಕ್ ಮೀಟರ್ ಮರಳನ್ನು ತೆಗೆಯಲಾಗಿದ್ದು, ಲಕ್ಷಾಂತರ ಲಾರಿಯವರಿಗೆ ಅ ನುಕೂಲವಾಗಿದೆ.



ಅದೇ ರೀತಿ ಕನ್ನಂಬಾಡಿಯಲ್ಲೂ ಮರಳು, ಹೂಳು ತೆಗೆಯಲು ಅವಕಾಶ ನೀಡಬೇಕೆಂದು ಸರ್ಕಾರಕ್ಕೆ ಹತ್ತು ಬಾರಿ ಪತ್ರ ಮುಖೇನ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಮೈಸೂರು ಲಾರಿ ಮಾಲೀಕರ ಸಂಘದವರೊಂದಿಗೆ ಚರ್ಚಿಸಿ ವಾರಾಂತ್ಯದೊಳಗೆ ಪ್ರತಿಭಟನೆ ನಡೆಸಲಾಗುವುದು ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಹೇಳಿದ್ದಾರೆ. ಕೆಆರ್‍ಎಸ್‍ನಲ್ಲಿ 124 ಅಡಿ ಆಳದ ನೀರು ಸಾಮಥ್ರ್ಯ ಸಂಗ್ರಹ ಹೊಂದಿರುವ ಕೆಆರ್‍ಎಸ್‍ನಲ್ಲಿ ಸುಮಾರು 7 ಅಡಿಗೂ ಹೆಚ್ಚು ಹೂಳು ತುಂಬಿದೆ. ಹೂಳು ತೆಗೆಯಲು ಅವಕಾಶ ನೀಡಿದರೆ ಫಲವತ್ತಾದ ಮಣ್ಣು ಈ ಪ್ರದೇಶದ ರೈತರು ಹೊಲಗಳಿಗೆ ಪಡೆಯಬಹುದಾಗಿದೆ.

ಮರಳನ್ನು ತೆಗೆಯಲು ಅನುಕೂಲವಾಗುತ್ತದೆ. ಸಾವಿರಾರು ರೈತರು ತಮ್ಮ ಹೊಲ-ಗದ್ದೆಗಳಿಗೆ ಈ ಮಣ್ಣನ್ನು ಸಾಗಿಸಿಕೊಳ್ಳುತ್ತಾರೆ. ಮರಳು ಸಾಗಿಸಲು ಲಾರಿಯವರಿಗೆ ಅವಕಾಶ ವಾಗುತ್ತದೆ. ಕೂಡಲೇ ಸರ್ಕಾರ ಹೂಳು, ಮರಳು ತೆಗೆಯಲು ಅವಕಾಶ ನೀಡಬೇಕು. ಮತ್ತೊಮ್ಮೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಮನವಿಗೆ ಸ್ಪಂದಿಸದಿದ್ದರೆ ಅನಿವಾರ್ಯವಾಗಿ ಮುಷ್ಕರ ನಡೆಸಬೇಕಾಗುತ್ತದೆ ಎಂದು ಷಣ್ಮುಗಪ್ಪ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin