ಹೆಂಡತಿ, ಮಕ್ಕಳನ್ನು ಹೊತ್ತೊಯ್ದ ಸಾಲಗಾರರು, ಮನನೊಂದ ಪತಿ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Haveri--01

ಹಾವೇರಿ,ಜೂ.5-ಹೆಂಡತಿ, ಮಕ್ಕಳನ್ನು ಸಾಲಗಾರರು ಹೊತ್ತೊಯ್ದಿದ್ದರಿಂದ ಮನನೊಂದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ನಿವಾಸಿ ಉದಯ್ ಎಂಬುವರಿಗೆ ಪವನ್ ಎಂಬ ವ್ಯಕ್ತಿ ಒಂದು ಲಕ್ಷ ರೂ. ಸಾಲ ನೀಡಿದ್ದ. ಆದರೆ ಉದಯ್ ಸಾಲ ಹಿಂದಿರುಗಿಸಿರಲಿಲ್ಲ. ಸಾಲಗಾರರ ಕಿರುಕುಳ ಜಾಸ್ತಿಯಾದಾಗ ಉದಯ್ ತನ್ನ ಹೆಂಡತಿ ಮಕ್ಕಳೊಂದಿಗೆ ಹುಬ್ಬಳ್ಳಿ ಬಿಟ್ಟು ಹಾವೇರಿಗೆ ಬಂದು ನೆಲೆಸಿದ್ದ.



ಹಾವೇರಿಗೂ ಬಂದ ಪವನ್ ಮತ್ತು ಸಹಚರರು ಉದಯ್ ಪತ್ನಿ ಮತ್ತು ಮಕ್ಕಳನ್ನು ಹೊತ್ತೊಯ್ದಿದ್ದರು. ಇದರಿಂದ ಮನನೊಂದ ಉದಯ್ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾನೆ. ಈ ಘಟನೆಯಿಂದ ಆಕ್ರೋಶಗೊಂಡ ನೆರೆಹೊರೆಯವರು ಪವನ್ ಮತ್ತು ಸಹಚರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಪೊಲೀಸರು ಉದಯ್ ಹೆಂಡತಿ, ಮಕ್ಕಳನ್ನು ಹೊತ್ತೊಯ್ದಿದ್ದ ಪವನ್ ಮತ್ತು ಇಬ್ಬರು ಸಹಚರರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin