ಲವ್ ಮಾಡಿ ಯುವಕನ ಜೊತೆ ಸುತ್ತುತ್ತಿದ್ದ ಮಗಳನ್ನು ಹೊಡೆದು ಕೊಂದ ತಾಯಿ

ಈ ಸುದ್ದಿಯನ್ನು ಶೇರ್ ಮಾಡಿ

Murder--gilrl

ಕೋಲಾರ, ಜೂ.6- ಮಗಳ ಪ್ರೀತಿಯ ವಿಚಾರ ತಿಳಿದು ಕೋಪಗೊಂಡ ತಾಯಿ ಆಕೆಯನ್ನು ಕೋಲಿನಿಂದ ಮನಬಂದಂತೆ ಥಳಿಸಿ ಕೊಲೆ ಮಾಡಿರುವ ಘಟನೆ ತಾಲೂಕಿನ ಚಿನ್ನಾಪುರ ಗ್ರಾಮದಲ್ಲಿ ನಡೆದಿದೆ.  ರಾಜೇಶ್ವರಿ (18) ಕೊಲೆಯಾದ ಮಗಳು. ಕಳೆದ ಕೆಲವು ದಿನಗಳಿಂದ ರಾಜೇಶ್ವರಿ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಅಲ್ಲದೆ, ಕಳೆದ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದಳು. ಜತೆಗೆ ಪ್ರಿಯಕರನೊಂದಿಗೆ ಸುತ್ತಾಡುತ್ತಿದ್ದ ವಿಷಯ ತಿಳಿದ ವೆಂಕಟಮ್ಮ ಕೋಪಗೊಂಡಿದ್ದಳು.



ಈ ವಿಚಾರವಾಗಿ ಮಗಳನ್ನು ಪ್ರಶ್ನಿಸಿದ್ದಾಳೆ. ತಾಯಿ ಮತ್ತು ಮಗಳ ನಡುವೆ ಮಾತಿಗೆ ಮಾತು ಬೆಳೆದಿದ್ದು, ವೆಂಕಟಮ್ಮ ಕೋಲಿನಿಂದ ತನ್ನ ಮಗಳನ್ನು ಹೊಡೆದು ಕೊಲೆಗೈದಿದ್ದಾಳೆ. ಈ ಸಂಬಂಧ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿ ವೆಂಕಟಮ್ಮನನ್ನು ಪೊಲೀಸರು ಬಂಧಿಸಿದ್ದಾರೆ.   ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin