ಚೀನಾದ ಪೆಟ್ರೋಕೆಮಿಕಲ್ಸ್ ಕಂಪನಿಯೊಂದರಲ್ಲಿ ಭಾರಿ ಸ್ಫೋಟ, 10 ಮಂದಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Petrochemical--01

ಜಿನಾನ್, ಜೂ.6-ಪೂರ್ವ ಚೀನಾದ ಶಾಂಡೊಂಗ್ ಪ್ರಾಂತ್ಯದ ಪೆಟ್ರೋಕೆಮಿಕಲ್ಸ್ ಕಂಪನಿಯೊಂದರಲ್ಲಿ ಭಾರೀ ಸ್ಫೋಟ ಸಂಭವಿಸಿ 10 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ಕಂಪನಿಯಲ್ಲಿದ್ದ ದ್ರವೀಕೃತ ಅನಿಲ ತುಂಬಿದ್ದ ಲಾರಿಯೊಂದು ಸ್ಫೋಟಗೊಂಡ ಪರಿಣಾಮ ಈ ದುರಂತ ಸಂಭವಿಸಿದೆ. ಈ ದುರ್ಘಟನೆಯಲ್ಲಿ 10 ಮಂದಿ ಸಾವಿಗೀಡಾಗಿ ಇತರ 9 ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಂಸ್ಥೆ ಮಾಲೀಕನನ್ನು ಬಂಧಿಸಲಾಗಿದೆ. ದುರಂತದ ಬಗ್ಗೆ ತನಿಖೆ ಮುಂದುವರಿದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin